ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಎನ್‌ಐಟಿಕೆಯಿಂದ ಸುರತ್ಕಲ್ ಬೀಚ್ ರಸ್ತೆ ತ್ಯಾಜ್ಯ ಸ್ವಚ್ಛತಾ 'ಪ್ಲಾಜ್‌ ರನ್‌' ಆಯೋಜನೆ!

ಮಂಗಳೂರು: ನಗರದ ಸುರತ್ಕಲ್‌ನಲ್ಲಿರುವ ಎನ್ಐಟಿಕೆ ವತಿಯಿಂದ ಸುರತ್ಕಲ್ ಬೀಚ್‌ ಪರಿಸರ ಸ್ವಚ್ಛತಾ ಕಾರ್ಯಕ್ರಮ ಪ್ಲಾಜ್‌ ರನ್‌ ಅನ್ನು ಇಂದು ಆಯೋಜಿಸಲಾಗಿತ್ತು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಾಗೂ ಕ್ರಾಂತಿ ಕಿಡಿ ಭಗತ್‌ ಸಿಂಗ್‌ ರವರ ಸ್ವಾತಂತ್ರ್ಯ ಹೋರಾಟದ ಬಲಿದಾನದ ನೆನಪಿಗಾಗಿ ಈ ಪ್ಲಾಜ್ ರನ್ ಅನ್ನು ಆಯೋಜಿಸಲಾಗಿತ್ತು. ಸ್ವಚ್ಛ ಭಾರತ್‌ ಅಭಿಯಾನದಡಿಯಲ್ಲಿ ಪ್ಲಾಜ್‌ ರನ್‌ ಅನ್ನು ಎನ್ಐಟಿಕೆ ಆಯೋಸಿದ್ದು, ಈ ಮೂಲಕ ಸ್ವಾತಂತ್ರ್ಯ ಹೋರಾಟದ ಬಲಿದಾನಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಹುತಾತ್ಮ ಭಗತ್‌ ಸಿಂಗ್‌ರ ತ್ಯಾಗ ಬಲಿದಾನಗಳನ್ನು ನೆನಪು ಮಾಡುವ ಕಾರ್ಯವನ್ನು ಮಾಡಲಾಯಿತು.

ನಗರದ ಸುರತ್ಕಲ್ ಬೀಚ್ ಪರಿಸರದಲ್ಲಿರುವ ಸದಾಶಿವ ದೇವಸ್ಥಾನದ ದ್ವಾರದಿಂದ ಆರಂಭವಾಗಿ ಎನ್‌ಐಟಿಕೆ ಬೀಚ್‌ನ ಲೈಟ್‌ಹೌಸ್‌ ವರೆಗೆ ತ್ಯಾಜ್ಯ ಸ್ವಚ್ಚತೆ ಮಾಡಲಾಯಿತು. ಈ ಮೂಲಕ ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳು, ಬೀಚ್‌ ರಸ್ತೆಗಳಲ್ಲಿರುವ ತ್ಯಾಜ್ಯಗಳನ್ನು ಸ್ವಚ್ಚಗೊಳಿಸಲಾಯಿತು. ಅಲ್ಲದೆ ತ್ಯಾಜ್ಯ ಸ್ವಚ್ಛತೆಯ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು.

Edited By : Nagesh Gaonkar
Kshetra Samachara

Kshetra Samachara

28/09/2021 07:49 pm

Cinque Terre

27.6 K

Cinque Terre

0

ಸಂಬಂಧಿತ ಸುದ್ದಿ