ಮುಲ್ಕಿ: ಹಳೆಯಂಗಡಿ ಸಮೀಪದ ಹತ್ತನೇ ತೋಕೂರು ಫೇಮಸ್ ಯೂತ್ ಕ್ಲಬ್ಮತ್ತು ಟೋರ್ಫೋಡೋಸ್ ಸ್ಪೋರ್ಟ್ಸ್ ಕ್ಲಬ್ ತೋಕೂರು
ಜಂಟಿ ಆಶ್ರಯದಲ್ಲಿ "ಆಝಾದಿ ಕಾ ಅಮೃತ ಮಹೋತ್ಸವ್" ಫಿಟ್ ಇಂಡಿಯಾ ಫ್ರೀಡಂ ರನ್ 2.0 ನ್ನು ತೋಕೂರು ಟೋರ್ಫೋಡೋಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಹಮ್ಮಿಕೊಳ್ಳಲಾಯಿತು.
ಪಿಟ್ ಇಂಡಿಯಾ ಫ್ರೀಡಂ ರನ್ 2.0 ಜಾಥಾ ಕಾರ್ಯಕ್ರಮಕ್ಕೆ ಟೋರ್ಫೋಡೋಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ನಿನ ಅಧ್ಯಕ್ಷ ಗೌತಮ್ ಶೆಟ್ಟಿಯವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ರಘುವೀರ್ ಸೂಟರ್ ಪೇಟೆ ಮಾತನಾಡಿ ಯುವಜನತೆಗೆ ದೈಹಿಕ ಮತ್ತು ಮಾನಸಿಕ ಸಧೃಡತೆ ಮುಖ್ಯವಾಗಿದ್ದು ಇದರಿಂದ ಸಾಮಾಜಿಕ ಚಿಂತನೆ ಹೊರಹೊಮ್ಮಲು ಸಾಧ್ಯ ಎಂದರು.
ಸಿ.ಎಸ್.ಎಫ್ ಇನ್ಸ್ಪೆಕ್ಟರ್ ಹಾಗೂ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ನಾಗರಾಜ್, ವಿಶ್ವಬ್ಯಾಂಕ್ ಕುಡಿಯುವ ನೀರು ಯೋಜನೆಯ ಅಧ್ಯಕ್ಷ ಗಣೇಶ್ ಜಿ ಬಂಗೇರ, ಸದಸ್ಯರಾದ ದಿನಕರ ಸಾಲ್ಯಾನ್ ಮತ್ತು ಮೋಹನ್ ಪೂಜಾರಿ, ಗಂಗಾಕಲ್ಯಾಣ ಕುಡಿಯುವ ನೀರು ಯೋಜನೆಯ ಸದಸ್ಯ ಹಿಮಕರ್ ಕೋಟ್ಯಾನ್ ಮತ್ತು ಫೇಮಸ್ ಯೂತ್ ಕ್ಲಬ್ಬಿನ ಗೌರವಾಧ್ಯಕ್ಷ ಗುರುರಾಜ ಎಸ್ ಪೂಜಾರಿ, ಅಧ್ಯಕ್ಷ ಭಾಸ್ಕರ್ ಅಮೀನ್ ತೋಕೂರು ಮತ್ತು ಸದಸ್ಯರು ಉಪಸ್ಥಿತರಿದ್ದರು.
Kshetra Samachara
26/09/2021 10:11 pm