ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ ತೋಟಗಾರಿಕಾ ಇಲಾಖೆಯಡಿ ಜಿಲ್ಲಾ ಪಂಚಾಯತ್ ಯೋಜನೆಯಡಿ ಜೇನುಕೃಷಿ ಮಾಹಿತಿ ಶಿಬಿರವು ಇಂದು ನಡೆಯಿತು.
ಶಿಬಿರವನ್ನು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜೇನು ಕೃಷಿಗಾರ ರಾಧಾಕೃಷ್ಣ ಪುತ್ತೂರು, ಮುಲ್ಕಿ ತಹಶೀಲ್ದಾರ್ ಕಮಲಮ್ಮ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರವೀಣ್ ಕೆ., ಸಹಾಯಕ ತೋಟಗಾರಿಕಾ ಅಧಿಕಾರಿ ಯುಗೇಂದ್ರ, ಜೇನು ಅನುವುಗಾರ ಪ್ರವೀಣ್, ಖ್ಯಾತ ವೈದ್ಯ ಡಾ. ಭಾಸ್ಕರಾನಂದ ಕುಮಾರ್, ಮುಲ್ಕಿ ತಾಲೂಕು ಕಿಸಾನ್ ಸಂಘದ ಅಧ್ಯಕ್ಷ ಪುರುಷೋತ್ತಮ ಕೋಟ್ಯಾನ್ ಉಪಸ್ಥಿತರಿದ್ದರು.
ಅಕ್ಟೋಬರ್ 3ರಂದು ಬೆಟ್ಟಂಪಾಡಿಯ ಜೇನುಕೃಷಿ ಸಾಧಕ ಮನಮೋಹನ್ ಅವರಲ್ಲಿಗೆ ತರಬೇತಿ ಪಡೆಯಲು ಇಚ್ಛಿಸಿ 70 ಶಿಬಿರಾರ್ಥಿಗಳು ಹೆಸರು ನೋಂದಾಯಿಸಿದರು.
Kshetra Samachara
25/09/2021 06:23 pm