ಉಡುಪಿ: ಉಡುಪಿಯ ಕಡಿಯಾಳಿಯ ಪ್ರಸಿದ್ಧ ಶ್ರೀಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ನಡೆಯುತ್ತಿದ್ದು ಇಂದು ರಾತ್ರಿ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕರಸೇವೆ ನಡೆಸಿದರು.
ದೇವಸ್ಥಾನದ ಸುತ್ತುಪೌಳಿ ಕೆಲಸದಲ್ಲಿ ಭಾಗಿಯಾದ ಸಚಿವೆ , ದೇಗುಲದ ಪ್ರಾಂಗಣದಲ್ಲಿ ಗ್ರಾಮಸ್ಥರ ಜೊತೆ ಕರಸೇವೆ ನಡೆಸಿದರು.
ಬುಟ್ಟಿಯಲ್ಲಿ ಕಲ್ಲು- ಮಣ್ಣು ಸಾಗಿಸುವ ಮೂಲಕ ಕೇಂದ್ರ ಕೃಷಿ ಸಚಿವೆ ಗಮನ ಸೆಳೆದರು.
ದೇವಿಯ ಕಾರ್ಯದಲ್ಲಿ ಭಾಗಿಯಾಗಿರುವುದು ಮನಸ್ಸಿಗೆ ಖುಷಿಯಾಗಿದೆ. ಭಕ್ತರು ಕರಸೇವೆಯಲ್ಲಿ ಹೆಚ್ಚೆಚ್ಚು ಭಾಗಿಯಾಗಿ.
ಕರಸೇವೆಯಿಂದಲೇ ಹಲವು ದೇವಸ್ಥಾನಗಳು ನಿರ್ಮಾಣವಾಗಿವೆ ಎಂದು ಕರಸೇವೆ ಬಳಿಕ
ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
Kshetra Samachara
24/09/2021 09:07 pm