ಉಡುಪಿ: ಉಡುಪಿ ಬಾರ್ ಅಸೋಸಿಯೇಷನ್ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕಾರ್ಯದರ್ಶಿ ಸ್ಥಾನಕ್ಕೆ ಈ ಮೊದಲೇ ಚುನಾವಣೆ ನಡೆದಿದ್ದು ಖ್ಯಾತ ವಕೀಲ ಬಿ .ನಾಗರಾಜ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರ ಜೊತೆಗೆ ಉಪಾಧ್ಯಕ್ಷ ಹುದ್ದೆ ಮತ್ತು ಕಾರ್ಯದರ್ಶಿ ಹುದ್ದೆಗೂ ಅವಿರೋಧ ಆಯ್ಕೆ ನಡೆದಿದೆ. ಉಳಿದ ಸ್ಥಾನಗಳಿಗೆ ಇವತ್ತು ಚುನಾವಣೆ ನಡೆದಿದ್ದು ಕುತೂಹಲಕರ ಘಟ್ಟಕ್ಕೆ ತಲುಪಿದೆ.
ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಇನ್ನೂ ಕೂಡ ಮುಗಿದಿಲ್ಲ. ರಾತ್ರಿ ಹೊತ್ತು ಫಲಿತಾಂಶ ಹೊರ ಬರುವ ನಿರೀಕ್ಷೆ ಇದೆ. ಈ ಕುರಿತು ಪಬ್ಲಿಕ್ ನೆಕ್ಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಬಾರ್ ಎಸೋಶಿಯೇಷನ್ ನೂತನ ಅಧ್ಯಕ್ಷ ಬಿ ನಾಗರಾಜ್, ಯಾರೇ ಚುನಾಯಿತರಾದರೂ ಅತ್ಯುತ್ತಮ ತಂಡ ನನಗೆ ಸಿಗಲಿದೆ. ಉತ್ತಮ ತಂಡವನ್ನು ಬಳಸಿಕೊಂಡು ಉತ್ತಮ ಕೆಲಸ ಮಾಡುತ್ತೇನೆ. ಆದಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. 2021 22 , ಮತ್ತು 2022 23ನೇ ಸಾಲಿನಲ್ಲಿ ಬಾರ್ ಅಸೋಸಿಯೇಷನ್ ನಲ್ಲಿ ಒಳ್ಳೆಯ ಕೆಲಸ ಮಾಡಿ ತೋರಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Kshetra Samachara
24/09/2021 07:46 pm