ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹಿರಿಯ ಹಿಮ್ಮೇಳ ವಾದಕ ಮೋಹನ ಶೆಟ್ಟಿಗಾರ್ ಮಿಜಾರು ಕಡಬದ್ವಯ ಸಂಸ್ಕರಣಾ ಯಕ್ಷಗಾನ ಪ್ರಶಸ್ತಿ..

ಮಂಗಳೂರು: ಮಂಗಳೂರಿನ ರಥಬೀದಿಯ ಕಡಬ ಸಂಸ್ಮರಣಾ ಸಮಿತಿಯ ದ್ವಿತೀಯ ವರ್ಷಾಚರಣೆಯ ಹಿನ್ನೆಲೆಯಲ್ಲಿ “ಕಡಬದ್ವಯ ಸಂಸ್ಕರಣಾ ಯಕ್ಷಗಾನ ಪ್ರಶಸ್ತಿ 2021"ನ್ನು ಮಂಗಳೂರು ತಾಲೂಕಿನ ಮಿಜಾರು ನೀರ್ಕೆರೆ ನಿವಾಸಿ ಹಿರಿಯ ಹಿಮ್ಮೇಳ ವಾದಕ ಮೋಹನ ಶೆಟ್ಟಿಗಾರ್ ಮಿಜಾರು ಇವರಿಗೆ ಪ್ರಶಸ್ತಿಯನ್ನು ನಗದಿನೊಂದಿಗೆ ನೀಡಿ ಗೌರವಿಸಲಾಗುವುದೆಂದು ಅಧ್ಯಕ್ಷ ಬೆಳುವಾಯಿ ಸುಂದರ ಆಚಾರ್ಯ ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಪ್ರಸಿದ್ಧವಾಗಿದ್ದ ಕರ್ನಾಟಕ ಯಕ್ಷಗಾನ ಮೇಳದಲ್ಲಿ ಖ್ಯಾತ ಭಾಗವತರಾಗಿದ್ದ ಸಂಗೀತ ವಿದ್ವಾನ್ ದಾಮೋದರ ಮಂಡೆಚ್ಚ ಹಾಗೂ ಅದೇ ಮೇಳದಲ್ಲಿ ರಸರಾಗ ಚಕ್ರವರ್ತಿ ಎಂದೆನಿಸಿರುವ ದಿನೇಶ ಅಮ್ಮಣ್ಣಾಯರೊಂದಿಗೆ ಸುಮಾರು 7 ವರ್ಷ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದಲ್ಲಿ ಸತತ 35 ವರ್ಷದಷ್ಟು ಕಾಲ ಕಲಾಸೇವೆಗೈದಿದ್ದರು. ತಾಳಮದ್ದಳೆ ಕೂಟಗಳಲ್ಲಿ, ಯಕ್ಷಗಾನ ಕಲೋತ್ಸವ, ಶಿಬಿರಗಳಲ್ಲಿ ಹಾಗೂ ಮಳೆಗಾಲದ ಪ್ರದರ್ಶನಗಳಲ್ಲಿ ಭಾಗಿಯಾಗುತ್ತಾ ದೇಶ ವಿದೇಶಗಳಲ್ಲೂ ವಾದನದ ಮೂಲಕ ತಮ್ಮ ಕೀರ್ತಿಧ್ವಜವನ್ನು ಅರಳಿಸಿ ಕಳೆದ ವರ್ಷವಷ್ಟೇ ಶ್ರೀ ಕಟೀಲು ಮೇಳಕ್ಕೆ ನಿವೃತ್ತಿ ಜೀವನವನ್ನು ಘೋಷಿಸಿದ್ದಾರೆ.

ಅಕ್ಟೋಬರ್ 3ರ ಆದಿತ್ಯವಾರ ಮೂಡಬಿದಿರೆ ಕ್ಷೇತ್ರದ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಅಂಗಣದಲ್ಲಿ ಮಧ್ಯಾಹ್ನ 2 ರಿಂದ ಪ್ರಶಸ್ತಿ ಪ್ರದಾನ ಹಾಗೂ ಹಿರಿಯ ಕಲಾವಿದರುಗಳಿಂದ “ಶ್ರೀಮತಿ ಪರಿಣಯ” ಎಂಬ ಯಕ್ಷಗಾನ ಪ್ರದರ್ಶನದೊಂದಿಗೆ ಕಾರ್ಯಕ್ರಮ ನಡೆಯಲಿದೆ ಅಂದರು.

Edited By : Manjunath H D
Kshetra Samachara

Kshetra Samachara

23/09/2021 12:40 pm

Cinque Terre

14.57 K

Cinque Terre

0

ಸಂಬಂಧಿತ ಸುದ್ದಿ