ಉಡುಪಿ: ವಿದ್ವಾಂಸ ಸೂರ್ಯಪ್ರಕಾಶ ರಾವ್ ರಚಿಸಿದ 'ಪಿತೃಯಜ್ಞ ವಿಧಿವರ್ಣನಮ್' ಗ್ರಂಥವನ್ನು ಉಡುಪಿ ಕೃಷ್ಣಾಪುರ ಮಠದಲ್ಲಿ ಸೋಮವಾರ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಯಾವುದೇ ಧಾರ್ಮಿಕ ಕರ್ಮಗಳ ಹಿನ್ನೆಲೆ ಅರಿತು ಆಚರಿಸಿದಾಗಲೇ ಶ್ರೇಯಸ್ಸು ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಈ ಹೊತ್ತಗೆಯು ಸಮಾಜಕ್ಕೆ ಮಾರ್ಗದರ್ಶಿಯಾಗಿದೆ ಎಂದು ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಈ ಸಂದರ್ಭ ಲೇಖಕ, ವಿದ್ವಾಂಸ ಸೂರ್ಯಪ್ರಕಾಶ ಎನ್ ರಾವ್, ಡಾ. ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ, ರಾಮಚಂದ್ರ ಭಟ್ ತೋಕೂರು, ಸುಬ್ರಹ್ಮಣ್ಯ ಭಟ್ ತೋಕೂರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
21/09/2021 07:46 am