ಮುಲ್ಕಿ: ಬಿಜೆಪಿ ಬೆಳ್ಳಾಯರು ಬೂತ್ 1ರ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಹುಟ್ಟುಹಬ್ಬದ ಪ್ರಯುಕ್ತ ಸೇವೆ ಮತ್ತು ಸಮರ್ಪಣೆ ಕಾರ್ಯಕ್ರಮ ನಡೆಯಿತು. ಈ ವೇಳೆ ಬೆಳ್ಳಾಯರು ಗ್ರಾಮದ ಕೊಳ್ನಾಡು ರಾಷ್ಟ್ರೀಯ ಹೆದ್ದಾರಿಯಿಂದ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಹೋಗುವ ಸುಖಾನಂದ ಶೆಟ್ಟಿ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಮುಳ್ಳಿನ ಪೊದರು, ಗಿಡ ಗಂಟಿಗಳನ್ನು ಕಡಿದು ಸ್ವಚ್ಛಗೊಳಿಸುವ ಮುಖಾಂತರ ಶ್ರಮದಾನ ಮಾಡಲಾಯಿತು.
ಸೇವಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಸದಸ್ಯ ವಿನೋದ್ ಸಾಲ್ಯಾನ್, ಬಿಜೆಪಿ ಬೂತ್ ಅಧ್ಯಕ್ಷ ದಿವ್ಯೇಶ್ ದೇವಾಡಿಗ, ಬೂತ್ ಕಾರ್ಯದರ್ಶಿ ಅಭಿಷೇಕ್, ಮಯೂರ್ ಪೂಜಾರಿ, ಹರ್ಷಿತ್, ಪ್ರೇಮನಾಥ್ ಉಪಸ್ಥಿತರಿದ್ದರು.
Kshetra Samachara
20/09/2021 10:58 pm