ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: 6ನೇ ವರ್ಷದ ಕಂಬಳ ಓಟಗಾರ ತರಬೇತಿ ಶಿಬಿರ ಉದ್ಘಾಟನೆ

ಮೂಡುಬಿದಿರೆ: ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲಾ ವ್ಯಾಪ್ತಿ ಹೊಂದಿರುವ ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ವತಿಯಿಂದ ಮೂಡುಬಿದಿರೆ ಒಂಟಿಕಟ್ಟೆಯಲ್ಲಿರುವ ವೀರ ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದ ಕೋಟಿ-ಚೆನ್ನಯ ಕಂಬಳ ಕ್ರೀಡಾಂಗಣದಲ್ಲಿ 15 ದಿನಗಳು ನಡೆಯುವ 6ನೇ ವರ್ಷದ ಕಂಬಳ ಓಟಗಾರ ತರಬೇತಿ ಶಿಬಿರಕ್ಕೆ ಭಾನುವಾರ ಕಡಲಕೆರೆಯ ಸೃಷ್ಟಿ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ಮಾಜಿ ಸಚಿವ, ಮೂಡುಬಿದಿರೆ ಕಂಬಳ ಸಮಿತಿಯ ಮಾಜಿ ಅಧ್ಯಕ್ಷ ಅಭಯಚಂದ್ರ ಜೈನ್ ತರಬೇತಿ ಶಿಬಿರವನ್ನು ಉದ್ಘಾಟಿಸಿದರು. ಕಂಬಳಕ್ಕೆ ಒಲಿಂಪಿಕ್ಸ್ ಶಿಸ್ತಿನ ಪರಿಕಲ್ಪನೆಯನ್ನು ಅಕಾಡೆಮಿಕ್ ಆಗಿ ನೀಡಲು ಪರಿಶ್ರಮಿಸುತ್ತಿರುವ ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ ಹಾಗೂ ಅವರ ತಂಡದ ಸೇವೆ ಶ್ಲಾಘನೀಯ ಎಂದರು.

ಆದಾನಿ ಗ್ರೂಪ್‌ನ ಆಡಳಿತ ನಿರ್ದೇಶಕ ಕಿಶೋರ್ ಆಳ್ವ ಅಧ್ಯಕ್ಷತೆವಹಿಸಿದರು.ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಕಂಬಳ ಯಜಮಾನರಾದ ನಂದಳಿಕೆ ಶ್ರೀಕಾಂತ ಭಟ್, ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಸಿದ್ದಕಟ್ಟೆ ಪೊಡುಂಬ ಸಂದೇಶ ಶೆಟ್ಟಿ, ರಾಷ್ಟಿçÃಯ ತರಬೇತುದಾರರಾದ ವಸಂತ ಜೋಗಿ, ಶಾಂತರಾಮ್, ತೀರ್ಪುಗಾರ ನವೀನ್‌ಚಂದ್ರ ಅಂಬೂರಿ, ಶಿಬಿರಾಧಿಕಾರಿ, ಕಂಬಳದ ಸವ್ಯಸಾಚಿ ಸರಪಾಡಿಯ ಜೋನ್ ಸಿರಿಲ್ ಡಿ'ಸೋಜ ಭಾಗವಹಿಸಿದರು. ಅಕಾಡೆಮಿ ಸಂಚಾಲಕ ಕೆ. ಗುಣಪಾಲ ಕಡಂಬ ಪ್ರಸ್ತಾವನೆಗೈದರು.

ಮೂಡುಬಿದಿರೆ ಕಂಬಳದ ಪ್ರೋತ್ಸಾಹಕರಾಗಿದ್ದ ಮಾಜಿ ಕೇಂದ್ರಸಚಿವ ಆಸ್ಕರ್ ಫೆರ್ನಾಂಡಿಸ್, ಕಂಬಳ ಕೋಣಗಳ ಯಜಮಾನ ಗುರುವಪ್ಪ ಕೆದುಬರಿ ಸಹಿತ ಕಂಬಳ ರಂಗದಲ್ಲಿದ್ದು ನಿಧನ ಹೊಂದಿರುವ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ಅಕಾಡೆಮಿ ಪ್ರಮುಖರಾದ ಈದು ಪಾಡ್ಯಾರಮನೆ ಜ್ವಾಲಾಪ್ರಸಾದ್ ಸ್ವಾಗತಿಸಿ, ಸುರೇಶ್ ಕೆ. ಪೂಜಾರಿ ವಂದಿಸಿದರು. ರವೀಂದ್ರ ಕುಕ್ಕುಂದೂರು ನಿರೂಪಿಸಿದರು.

Edited By : Manjunath H D
Kshetra Samachara

Kshetra Samachara

19/09/2021 07:06 pm

Cinque Terre

10.1 K

Cinque Terre

0

ಸಂಬಂಧಿತ ಸುದ್ದಿ