ಮುಲ್ಕಿ: ಮುಲ್ಕಿ, ಕಿನ್ನಿಗೋಳಿ, ಹಳೆಯಂಗಡಿ ಪಕ್ಷಿಕೆರೆ ಪರಿಸರದಲ್ಲಿ ವಿಶ್ವಬ್ರಾಹ್ಮಣ ಸೇವಾ ಸಂಘದ ವತಿಯಿಂದ ಸಂಭ್ರಮದ ಸರಳ ವಿಶ್ವಕರ್ಮ ದಿನಾಚರಣೆ ನಡೆಯಿತು
ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ) ಹಾಗೂ ಶ್ರೀಕಾಳಿಕಾಂಬ ಮಹಿಳಾ ವೃಂದದ ವತಿಯಿಂದ ಪರಮಪೂಜ್ಯ ಜಗದ್ಗುರು ಅಷ್ಟೋತ್ತರ ಶತ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರ ಶುಭಾಶೀರ್ವಾದ ದೊಂದಿಗೆ 35 ನೇ ವರ್ಷದ ಭಗವಾನ್ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆಯು ರಾಜರತ್ನ ಪುರದ ಸರಾಫ್ ಅಣ್ಣಯ್ಶಾಚಾರ್ಯ ಸಭಾಭವನದಲ್ಲಿ ನಡೆಯಿತು.
ಉದ್ಯಮಿ ಪ್ರಥ್ವಿರಾಜ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಮುಲ್ಕಿ ವಿಶ್ವಬ್ರಾಹ್ಮಣ ಸೇವಾ ವತಿಯಿಂದ ಶ್ರೀ ವಿಶ್ವಕರ್ಮ ದಿನಾಚರಣೆಯ ಪ್ರಯುಕ್ತ ವಿರಾಟ್ ವಿಶ್ವಕರ್ಮ ಪೂಜೆ ನಡೆಯಿತು. ಸಂಸ್ಥೆಯ ಅಧ್ಯಕ್ಷ ಕೆ,ಜಗದೀಶ ಆಚಾರ್ಯ ಹಾಗೂ ಪದಾಧಿಕಾರಿಗಳು ಭಕ್ತಾದಿಗಳು ಹಾಜರಿದ್ದರು.
ಮೂಲ್ಕಿ ಒಂಬತ್ತು ಮಾಗಣೆ ಶ್ರೀ ಕಾಳಿಕಾಂಬ ದೇವಸ್ಥಾನದ ವತಿಯಿಂದ ಶ್ರೀ ವಿಶ್ವಕರ್ಮ ದಿನಾಚರಣೆಯ ಪ್ರಯುಕ್ತ ವಿರಾಟ್ ವಿಶ್ವಕರ್ಮ ಪೂಜೆ ನಡೆಯಿತು. ಶ್ರೀದೇವಳದ ಅರ್ಚಕವೃಂದ ಆಡಳಿತಮಂಡಳಿ ಅಭಿವೃದ್ಧಿ ಸಮಿತಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
16/09/2021 08:14 pm