ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುನರೂರು: ಸಂಭ್ರಮದ ಭಕ್ತಿಪೂರ್ವಕ ಲಕ್ಷ ಬಿಲ್ವಾರ್ಚನೆ, ನೂತನ ಧ್ವಜಸ್ತಂಭ ತೈಲಾಧಿವಾಸ

ಮೂಲ್ಕಿ: ಪುನರೂರು ಶ್ರೀ ವಿಶ್ವನಾಥ ದೇವಸ್ತಾನದಲ್ಲಿ ಸೆ. 16 ಗುರುವಾರ ಕನ್ಯಾ ಸಂಕ್ರಮಣದ ಶುಭ ಮುಹೂರ್ತದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ಭಕ್ತರ ಶ್ರೇಯೋಭಿವೃದ್ಧಿಗಾಗಿ ಪುನರೂರು ವಿಪ್ರ ಸಂಪದದ ಸಹಭಾಗಿತ್ವ ಮತ್ತು ಸ್ಥಳೀಯ ಸಂಘ-ಸಂಸ್ಥೆಗಳ, ಊರ ಪರವೂರ ಭಕ್ತರ ಸಹಕಾರ ದೊಂದಿಗೆ ವೇದಮೂರ್ತಿ ಕಳತ್ತೂರು ಕರುಣಾಕರ ತಂತ್ರಿಯವರ ನೇತ್ವದಲ್ಲಿ ಲಕ್ಷ ಬಿಲ್ವಾರ್ಚನೆ ಮತ್ತು ನೂತನ ಧ್ವಜಸ್ತಂಭದ ತೈಲಾಧಿವಾಸ ಕಾರ್ಯಕ್ರಮ ಸಂಭ್ರಮದಿಂದ ಭಕ್ತಿಪೂರ್ವಕವಾಗಿ ನಡೆಯಿತು.

ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಬೆಳಗ್ಗೆ ಎಂಟು ಗಂಟೆಗೆ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ದೇವಳದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್, ಧರ್ಮದರ್ಶಿ ಹರಿಕೃಷ್ಣ ಪುನರೂರು ಮತ್ತಿತರರು ದೀಪ ಪ್ರಜ್ವಲನೆ ಮೂಲಕ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಬಳಿಕ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಮಹಾಪೂಜೆ ನಡೆದು ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ತೈಲಾಧಿವಾಸ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಕಟೀಲು ಕ್ಷೇತ್ರದ ಆರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿ ಮುಂದಿನ ದಿನಗಳಲ್ಲಿ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶ ನಡೆಯಲಿದ್ದು ಪೂರ್ವಭಾವಿಯಾಗಿ ನೂತನ ದ್ವಜಸ್ತಂಬಕ್ಕೆ ತೈಲಾಧಿವಾಸ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದ್ದು ಭಕ್ತರ ಸಹಕಾರ ಅಗತ್ಯ ಎಂದು ವಿನಂತಿಸಿದರು.

ಧರ್ಮದರ್ಶಿ ಹರಿಕೃಷ್ಣ ಪುನರೂರು ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಉಷಾ ಹರಿಕೃಷ್ಣ ಪುನರೂರು,ವಿಷ್ಣುಮೂರ್ತಿ ಆಚಾರ್ಯ , ಶಿವಳ್ಳಿ ಸ್ಪಂದನ ಕಟೀಲು ವಲಯದ ಅಧ್ಯಕ್ಷ ಅನಂತಪದ್ಮನಾಭ ಶಿಬರೂರು, ದೇವಪ್ರಸಾದ್ ಪುನರೂರು, ವಿಶ್ವನಾಥ ಪುನರೂರು, ಗೋಪಿನಾಥ್, ರವಿ ಶೆಟ್ಟಿ ಪುನರೂರು, ವಿಪ್ರ ಸಂಪದದ ಅಧ್ಯಕ್ಷ ಸುಧಾಕರ್ ರಾವ್, ರಾಘವೇಂದ್ರರಾವ್ ಕೆರೆಕಾಡು, ಪುರಂದರ ಡಿ ಶೆಟ್ಟಿಗಾರ್, ಸುರೇಶ್ ರಾವ್ ನೀರಳಿಕೆ, ಪ್ರಧಾನ ಅರ್ಚಕ ಗುರುಮೂರ್ತಿ ಭಟ್, ಮತ್ತಿತರರು ಹಾಜರಿದ್ದರು

Edited By :
Kshetra Samachara

Kshetra Samachara

16/09/2021 08:04 pm

Cinque Terre

5.82 K

Cinque Terre

0

ಸಂಬಂಧಿತ ಸುದ್ದಿ