ಸುರತ್ಕಲ್ : ಸುರತ್ಕಲ್ ಸಮೀಪದ ಸೂರಿಂಜೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಲೆ ತುಳು ಲಿಪಿ ಕಲ್ಪುಗ ಕಾರ್ಯಾಗಾರ ನಡೆಯಿತು ಕಾರ್ಯಾಗಾರವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ತುಳು ಲಿಪಿ ಬರೆಯುವ ಮೂಲಕ ಲಿಪಿ ಕಾರ್ಯಾಗಾರ ಕ್ಕೆ ಚಾಲನೆ ನೀಡಿ ಮಾತನಾಡಿ ತುಳುವರ ಮಾತ್ರ ಭಾಷೆ ಉಳಿಸುವಲ್ಲಿ ತುಳು ಪಾತ್ರ ಮಹತ್ತರ ವಾದದ್ದು. ತುಳು ಲಿಪಿ ತಾನು ಕಲಿತು ಬೇರೆಯವರಿಗೂ ಕಳಿಸಿದ್ದಲ್ಲಿ ಮಾತ್ರ ತುಳು ಲಿಪಿ ಉಳಿಯಲು ಸಾಧ್ಯ ಎಂದರು
ಮುಖ್ಯ ಅತಿಥಿ ಜೈ ತುಳುನಾಡ್ ಸಂಘಟನೆಯ ಅಧ್ಯಕ್ಷ ಸುದರ್ಶನ್ ಸುರತ್ಕಲ್ ಮಾತನಾಡಿ ಮುಂಬರುವ ಜನಗಣತಿ ಯಲ್ಲಿ ತುಳುವರಾದ ನಾವೆಲ್ಲ ಮಾತೃ ಭಾಷೆ ತುಳು ಎಂದು ನಮೂದಿಸಿ ಹಾಗೆಯೇ ತುಳು ಭಾಷೆಯು ರಾಜ್ಯ ದ ಅಧಿಕೃತ ಭಾಷೆಯಾಗಿ ಸೇರ್ಪಡೆ ಯಾಗಬೇಕು. ಈ ಬಗ್ಗೆ ಸೆಪ್ಟೆಂಬರ್ 13 ರಿಂದ ನಡೆಯುವ ಅಧಿವೇಶನ ದಲ್ಲಿ ನಮ್ಮ ತುಳುನಾಡಿನ ರಾಜಕಾರಣಿ ಗಳು ಮಾತನಾಡ ಬೇಕು ಎಂದು ಒತ್ತಾಯಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುಕೇಶ್ ಶೆಟ್ಟಿ ಬೈಲುಗುತ್ತು, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನಾಗೇಶ್ ಕುಲಾಲ್ , ಸೂರಿಂಜೆ ಗ್ರಾಪಂ ಮಾಜೀ ಅಧ್ಯಕ್ಷ ಜಗನ್ನಾಥ ಶೆಟ್ಟಿ,
ಜೈ ತುಳುನಾಡ್ ಸಂಘಟನೆ ಯ ಉಪಾಧ್ಯಕ್ಷ ಉದಯ್ ಪೂಂಜ,
ಲಿಪಿ ಶಿಕ್ಷಕಿ ಕುಸಲ. ಉಷಾ ಉಪಸ್ಥಿತರಿದ್ದರು
ಈ ಸಂಧರ್ಭ ಮುಂಬೈ ನ ಉದ್ಯಮಿ 71 ವರ್ಸದ ಡಿ ಕೆ ಶೆಟ್ಟಿ ಈ ಪ್ರಾಯದಲ್ಲಿ ವಾಟ್ಸಪ್ಪ್ ಒನ್ ಲೈನ್ ನಲ್ಲಿ ಲಿಪಿ ಕಲಿತ ಬಗ್ಗೆ ಅನುಭವ ಹಂಚಿಕೊಂಡರು..
Kshetra Samachara
12/09/2021 10:04 pm