ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಒಂದು ವಿವಿ ಮಾಡುವ ಕಾರ್ಯವನ್ನು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಮಾಡಿದೆ

ಮಂಗಳೂರು: ಒಂದು ಶತಮಾನದಲ್ಲಿ ಯಕ್ಷಗಾನದ ಉಳಿವು ಹಾಗೂ ಬೆಳವಣಿಗೆಗೆ ಕಾರಣೀಕರ್ತರಾದ ಕಲಾವಿದರ ಸಂಸ್ಕರಣೆಯನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ತನ್ನ ಯಕ್ಷಾನುಗ್ರಹ ವಾಟ್ಸ್ಆ್ಯಪ್ ಬಳಗದ ಮೂಲಕ ಮಾಡಿದೆ. ಈ ಮೂಲಕ ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಮಹತ್ತರವಾದ ಕಾರ್ಯವನ್ನು ಪ್ರತಿಷ್ಠಾನವು ಮಾಡಿದೆ ಎಂದು ಯೋಗೀಶ್ ರಾವ್ ಚಿಗುರುಪಾದೆ ಹೇಳಿದರು.

ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಈ ಕಾರ್ಯಕ್ರಮವನ್ನು ವಾಟ್ಸ್ಆ್ಯಪ್ ಗ್ರೂಪ್ ನಲ್ಲಿ ಆಯೋಜಿಸಲಾಗಿತ್ತು. ತೆಂಕು-ಬಡಗು ಎರಡೂ ತಿಟ್ಟುನ ಕಲಾವಿದರ ಬಗ್ಗೆ ಅವರ ಕೊಡುಗೆಗಳನ್ನು ಈ ಚರ್ಚಿಸಲಾಗಿತ್ತು. ಮುಂದೆ ಇಲ್ಲಿ ಚರ್ಚಿತವಾದ ವಿಚಾರವನ್ನು, ಮಾಹಿತಿ ಪೂರ್ಣ ವಿಷಯವನ್ನು ಗ್ರಂಥರೂಪದಲ್ಲಿ ಪ್ರಕಟ ಮಾಡಲಾಗುತ್ತದೆ. ಈ ಗ್ರಂಥವು ಮುಂದೆ ಯಕ್ಷಗಾನ ಅಧ್ಯಯನ ಕುರಿತ ಅಧ್ಯಯನಗಳಿಗೆ ಒಂದು ಮಹತ್ವಪೂರ್ಣ ಆಕರವಾಗಲಿದೆ ಎಂದು ಹೇಳಿದರು.

ಈ ಲೇಖನ ಸರಣಿ ಕಾರ್ಯಕ್ರಮವಾಗಿ 105 ದಿನಗಳ ಕಾಲ ನಡೆಯಲಿದ್ದು, ಈಗಾಗಲೇ 100 ದಿನಗಳು ದಾಟಿದೆ. ಮುಂದೆ ಪರಿಸ್ಥಿತಿಗೆ ಅನುಗುಣವಾಗಿ ವಾರದಲ್ಲಿ ಮೂರು ದಿನಗಳು ಮುಂದುವರಿಯಲಿದೆ ಎಂದು ಯೋಗೀಶ್ ರಾವ್ ಚಿಗುರುಪಾದೆ ಹೇಳಿದರು.

Edited By : Shivu K
Kshetra Samachara

Kshetra Samachara

09/09/2021 03:57 pm

Cinque Terre

10.02 K

Cinque Terre

0

ಸಂಬಂಧಿತ ಸುದ್ದಿ