ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಎಕ್ಕಾರು ಕಾಯ್ದಂಡ ಯುವಕ ಮಂಡಲದಿಂದ ಹಿರಿಯ ಶಿಕ್ಷಕರಿಗೆ ಅಭಿನಂದನೆ

ಬಜಪೆ: ಕಾಯ್ದಂಡ ಯುವಕ ಮಂಡಲ ( ರಿ )ಎಕ್ಕಾರು ಇದರ ದಶಮ ಸಂಭ್ರಮ ದ ಅಂಗವಾಗಿ ಇಂದು ಎಕ್ಕಾರು ಶಾಲೆಯಲ್ಲಿ ಸುಧೀರ್ಘ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ರಮಾನಂದ ರಾವ್ ಕಟೀಲ್,ಶಾರದ ಕೆ. ಕಲ್ಲೂರಾಯ, ವಿನೋದ ಶೆಟ್ಟಿ ಅವರನ್ನು ಶಿಕ್ಷಕರ ದಿನಾಚರಣೆಯ ಗುರುವಂದನಾ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಯುವಕ ಮಂಡಲ ದ ಸದಸ್ಯರ ಉಪಸ್ಥಿತಿಯಲ್ಲಿ ಶಿಕ್ಷಕರ ಸ್ವ ಗೃಹಕ್ಕೆ ತೆರಳಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಕಸ್ತೂರಿ ಪಂಜ, ಎಕ್ಕಾರು ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಸುರೇಖಾ ರೈ,ಪಂಚಾಯತ್ ಸದಸ್ಯರುಗಳಾದ ಸುದೀಪ್ ಅಮೀನ್, ಸತೀಶ್ ಶೆಟ್ಟಿ ,ಹಿರಿಯರಾದ ಈಶ್ವರ್ ಕಟೀಲ್, ಪ್ರಕಾಶ್ ಕುಕ್ಯಾನ್, ವಿಜಯ ಶೆಟ್ಟಿ ಕಿನ್ನಿಲ್ಲ, ಯುವಕ ಮಂಡಲ ದ ಗೌರವಾಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಅಧ್ಯಕ್ಷ ಶಿವಾನಂದ ಶೆಟ್ಟಿ, ಯುವಕ ಮಂಡಲದ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

05/09/2021 10:33 pm

Cinque Terre

22.39 K

Cinque Terre

0

ಸಂಬಂಧಿತ ಸುದ್ದಿ