ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಮನೆ ಮನೆಗೂ ತಲುಪಲಿ ಕೇಂದ್ರ ಸರಕಾರದ ಇ-ಶ್ರಮ ಯೋಜನೆ

ಕಾರ್ಕಳ: ಯೂಥ್ ಫಾರ್ ಸೇವಾ ಉಡುಪಿ ಇವರ ಆಶ್ರಯದಲ್ಲಿ ಯುವವಾಹಿನಿ(ರಿ) ಕಾರ್ಕಳ ಘಟಕ ಇವರ ಸಹಕಾರ ಮತ್ತು ಸೇವಾ ಸಿಂಧು ಸಂಯೋಜನೆಯಲ್ಲಿ ಕಾರ್ಕಳದ ಎಲ್ಲಾ ಫಲನುಭವಿಗಳಿಗೆ ಕೇಂದ್ರ ಸರಕಾರದ ಇ-ಶ್ರಮ ಯೋಜನೆ ಅಸಂಘಟಿತ ಕಾರ್ಮಿಕ ಕಾರ್ಡ್ ಉಚಿತ ನೋಂದಾವಣೆ ಕಾರ್ಯಕ್ರಮ ರಾಮಪ್ಪ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬಾಲಾಜಿ ಶಿಬಿರದ ಗುರುಗಳಾದ ಬಾಲಕೃಷ್ಣ ಹೆಗ್ಡೆ ಭಾರತಾಂಬೆಗೆ ಹೂವು ಹಾಕಿ, ದೀಪ ಪ್ರಜ್ವಲನೆಯ ಮೂಲಕ ಚಾಲನೆಯನ್ನು ನೀಡಿದರು. ಇ-ಶ್ರಮ ಯೋಜನೆಯ ರೂಪುರೇಷೆಗಳನ್ನು ಗಣೇಶ ದಿಶಾನಿ ಅವರು ವಿವರಿಸಿದರು. ಕಾರ್ಯಕ್ರಮದ ನಿರೂಪಣೆ ಯೂಥ್ ಫಾರ್ ಸೇವಾ ತಂಡದ ಶ್ರೀಮತಿ ರಮಿತಾ ಶೈಲೆಂದ್ರ ರಾವ್ ಮಾಡಿದರು. ಯುವ ವಾಹಿನಿ ಘಟಕದ ಅಧ್ಯಕ್ಷ ಗಣೇಶ್ ಸಾಲಿಯಾನ್ ಅವರು ಧನ್ಯವಾದವನ್ನು ನೆರವೇರಿಸಿದರು. ವೇದಿಕೆಯಲ್ಲಿ ಕಾರ್ಕಳ ಪುರಸಭಾ ಸದಸ್ಯರಾದ ಶ್ರೀಮತಿ ಮೀನಾಕ್ಷಿ, ಸೇವಾ ಸಿಂಧೂ ಅನಿಲ್ ಕಾಮತ್ ಹಾಗೂ ಕಾರ್ಕಳ ಕಾರ್ಮಿಕ ಇಲಾಖೆಯ ಮೋಹನ್ ಶೆಣೈ ಇವರು ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಯೂಥ್ ಫಾರ್ ಸೇವಾ ತಂಡದ ಸದಸ್ಯರು, ಯುವ ವಾಹಿನಿ ತಂಡದ ಸದಸ್ಯರು,ಹಾಗೂ ಕಾರ್ಕಳದ ಸುಮಾರು 780 ಕ್ಕೂ ಮಿಕ್ಕಿದ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡರು.

Edited By : PublicNext Desk
Kshetra Samachara

Kshetra Samachara

31/08/2021 12:30 pm

Cinque Terre

9.28 K

Cinque Terre

0