ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಪ್ರತಿಭೆಗೆ ವೇದಿಕೆ ಬೇಕಿಲ್ಲ......

ಮುಲ್ಕಿ: ಇತ್ತೀಚೆಗೆ ಜನ್ಮದಿನ ಸಹಿತ ಹಬ್ಬಹರಿದಿನಗಳಿಗೆ ಶುಭಾಶಯಗಳು ಕೋರುವ ಪತ್ರಗಳೆಲ್ಲ ಮಾಯವಾಗಿ ಎಲ್ಲರೂ ಶುಭಾಶಯ ಕೋರಲು ಸಾಮಾಜಿಕ ಜಾಲತಾಣಗಳನ್ನೇ ಅವಲಂಬಿಸಿದ್ದಾರೆ. ಮುಲ್ಕಿಯ ಈ ಬೆಡಗಿ ಪ್ರತಿಯೊಂದು ಹಬ್ಬ-ಹರಿದಿನಗಳಿಗೆ ,ರಾಷ್ಟ್ರೀಯ ಹಬ್ಬಗಳಿಗೆ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಶುಭಾಶಯಗಳನ್ನು ಕೋರುವ ಮೂಲಕ ಮುಲ್ಕಿಯ ಪರಿಸರದಲ್ಲಿ ಮನೆಮಾತಾಗಿದ್ದಾರೆ.

ಪ್ರತಿಭೆಗೆ ವೇದಿಕೆ ಅವಶ್ಯಕತೆ ಇಲ್ಲಎಂದು ಸಾಮಾಜಿಕ ಜಾಲತಾಣಗಳನ್ನೇ ವೇದಿಕೆಯಾಗಿ ರೂಪಿಸಿಕೊಂಡು ತನ್ನಲ್ಲಿರುವ ಪ್ರತಿಭೆಯನ್ನು ಯಾರ ಸಹಾಯವಿಲ್ಲದೆ ವಿಶಿಷ್ಟ ರೀತಿಯಲ್ಲಿ ವಿಡಿಯೋ ಮಾಡುವುದರ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

ಸಾಮಾಜಿಕ ಕಳಕಳಿಯನ್ನು ಹೊಂದಿರುವ ಇವರು ವಿಶ್ವ ಪರಿಸರದ ದಿನ ಪರಿಸರ ಸಂರಕ್ಷಣೆಯ ಬಗ್ಗೆ ,ಸ್ವಚ್ ಭಾರತ ಬಗ್ಗೆಸಾಮಾಜಿಕ ಅರಿವು ಮೂಡಿಸುವ ವಿಡಿಯೋಗಳನ್ನು ಮಾಡಿದ್ದಾರೆ.

ಕೊರೊನಾದ ಮೊದಲ ದಿನಗಳಲ್ಲಿ ತನ್ನ ತಾಯಿ ರಚಿಸಿದ ಹಾಡುಗಳನ್ನುತಾಯಿ-ಮಗಳು ಹಾಡುವ ಮೂಲಕ ಜನರಲ್ಲಿ ಜನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.ಸ್ವಾತಂತ್ರ್ಯ ದಿನಾಚರಣೆ ,ಓಣಂ ,ಕೃಷ್ಣಾ ಜನ್ಮಾಷ್ಟಮಿ ಹೀಗೆಪ್ರತಿಯೊಂದು ಹಬ್ಬಗಳಿಗೂ ವಿಶಿಷ್ಟವಾದ ಸಾಂಪ್ರದಾಯಿಕ ರೀತಿಯಲ್ಲಿ ಶುಭಾಶಯವನ್ನು ಕೋರುವ ಮೂಲಕ ಮುಲ್ಕಿಯಲ್ಲಿ ಮನೆಮಾತಾಗಿದ್ದಾರೆ.

ಎಲೆ ಮರೆಯ ಕಾಯಿಯಂತೆ ಸದ್ದಿಲ್ಲದೆ ಸುದ್ದಿ ಮಾಡುತ್ತಿರುವ ಈಕೆ ಮುಲ್ಕಿಯ ಪ್ರಸಿದ್ಧ ವಕೀಲರಾದ ಎಂ ಭಾಸ್ಕರ್ ಹೆಗ್ಡೆ ಯವರ ಪುತ್ರಿ ಕೆ. ಸಮೀಕ್ಷಾ ಭಾಸ್ಕರ್ ಹೆಗ್ಡೆ. ಪ್ರಸ್ತುತ ಮಂಗಳೂರಿನ ಎಸ್. ಡಿ. ಎಂ ಕಾನೂನು ಕಾಲೇಜಿನ ಕಾನೂನು ಪದವಿ ವಿದ್ಯಾರ್ಥಿನಿಯಾದ ಈಕೆಯ ಪ್ರತಿಭೆಗೆ ಸರಿಯಾದ ಪುರಸ್ಕಾರ ದೊರೆತು ಇನ್ನೂಹೆಚ್ಚು ಪ್ರಸಿದ್ಧಿಯನ್ನು ಪಡೆಯಲಿ ಎಂದು ಹಾರೈಸೋಣ.

Edited By : PublicNext Desk
Kshetra Samachara

Kshetra Samachara

31/08/2021 12:21 pm

Cinque Terre

12.04 K

Cinque Terre

1