ಮುಲ್ಕಿ:ಯಕ್ಷಗಾನ ತಾಳಮದ್ದಲೆ ಕಲಾವಿದ ,ಶ್ರೀ ಅಂಬಾ ಭವಾನಿಯ ಪರಮ ಭಜಕ, ಅಂತರ್ಮುಖಿ ಸ್ವಭಾವದ ಆಧ್ಯಾತ್ಮಿಕ ಸೇವಾಮನೋಭಾವದ ಸಾಮಾಜಿಕ ರ.ರಾ. ಪವಾರ್ ರವರ ಸಂಸ್ಮರಣೆ ,ಪವಾರ್ ಪುರಸ್ಕಾರ ಪ್ರದಾನ, ಯಕ್ಷಗಾನ ತಾಳಮದ್ದಲೆ ಸೋಮವಾರ ಮುಲ್ಕಿ ಸಮೀಪದ ಕವತ್ತಾರು ಅಂಬಾಭವಾನಿ ಭಜನಾ ಮಂದಿರದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಜನಪದ ವಿದ್ವಾಂಸರಾದ ಕೆ ಎಲ್ ಕುಂಡಂತಾಯ ವಹಿಸಿ ಮಾತನಾಡಿ ಶ್ರೇಷ್ಠ ಯಕ್ಷಗಾನ ಕಲಾವಿದರ ಸಂಸ್ಮರಣೆ ಮೂಲಕ ಸಾಧಕರಿಗೆ ಗೌರವ ಶ್ಲಾಘನೀಯ ಎಂದರು
ವೇದಮೂರ್ತಿ ವಾದಿರಾಜ ಉಪಾಧ್ಯಾಯ ಶುಭಾಶಂಸನೆಗೈದು ಮಾತನಾಡಿ ಅವರ ಆದರ್ಶಗಳನ್ನು ಪಾಲಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕಾಗಿದೆ ಎಂದರು.
ಯಕ್ಷಗಾನ ದಿಗ್ಗಜ ಗಣೇಶ್ ಕೊಲಕಾಡಿ, ಹಿರಿಯ ಕಲಾವಿದ ಸುಕುಮಾರ ಶೆಟ್ಟಿ ಪವಾರ್ ಸಂಸ್ಮರಣ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಪವಾರ್ ಪುರಸ್ಕಾರ-2021 ನ್ನು ಬಪ್ಪನಾಡುಗುತ್ತು ಜಯರಾಮ ಶೆಟ್ಟಿ ಬಲೆಪು ರವರಿಗೆ ನೀಡಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷ ಮನೋಹರ ಕೋಟ್ಯಾನ್,ಯಕ್ಷಗಾನ ಕಲಾವಿದ ವಿಜಯಕುಮಾರ್ ಶೆಟ್ಟಿ,ಕಾಳಿಕಾಂಬ ಯಕ್ಷಗಾನ ಮಂಡಳಿಯ ಹಿರಿಯ ಸದಸ್ಯರಾದ ರಾಮಣ್ಣ ಆಚಾರ್ಯ,ಅಂಬಾಭವಾನಿ ಭಜನಾ ಮಂದಿರದ ಅಧ್ಯಕ್ಷರಾದ ದಯಾನಂದ ರಾವ್, ಗಿರಿಜಾ ರಮನಾಥ ಪವಾರ್, ಓಬೋಜಿರಾವ್,ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರಿಗೆ ಗೌರವಾರ್ಪಣೆ ಹಾಗೂ ಪ್ರಸಿದ್ದ ಕಲಾವಿದರಿಂದ ಕೋಟಿ-ಚೆನ್ನಯ್ಯ ತಾಳಮದ್ದಳೆ ನಡೆಯಿತು.
Kshetra Samachara
30/08/2021 09:10 pm