ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಎಲೆಯಲ್ಲಿ ಬಿಡಿಸಿದ ಶ್ರೀ ದೇವಿಯ ಭಾವಚಿತ್ರ ದೇವಸ್ಥಾನಕ್ಕೆ ಸಮರ್ಪಣೆ

ಮುಲ್ಕಿ:ಪಕ್ಷಿಕೆರೆಯ ಪ್ರತಾಪಾಚಾರ್ಯ ರವರು ಹಲಸಿನ ಎಲೆಯಲ್ಲಿ‌ ಕಟೀಲಿನ ಆರಾಧ್ಯಮೂರ್ತಿ ಶ್ರೀ ದುರ್ಗಾಪರಮೇಶ್ವರಿಯ ಭಾವಚಿತ್ರವನ್ನು ಚಿತ್ರಿಸಿ ಶೋಣ ಶುಕ್ರವಾರದಂದು ಕಟೀಲು ದೇವಸ್ಥಾನಕ್ಕೆ ತಂದು ದೇವಿಗೆ ಒಪ್ಪಿಸಿದ್ದಾರೆ. ಈ ಸಂದರ್ಭ ಕಟೀಲು ಕ್ಷೇತ್ರದ ಆರ್ಚಕ ಅನಂತಪದ್ಮನಾಭ ಆಸ್ರಣ್ಣ ಮಾತನಾಡಿ ಎಲೆಯಲ್ಲಿ ರಚಿಸಿದ ಕಟೀಲು ಶ್ರೀದೇವಿಯ ಭಾವಚಿತ್ರವನ್ನು ಶ್ರೀದುರ್ಗಾಪರಮೇಶ್ವರೀ ಪದವಿಪೂರ್ವಕಾಲೇಜಿನ ವಸ್ತುಸಂಗ್ರಹಾಲಯದಲ್ಲಿ‌ ಇಡಲಾಗುವುದು. ಪ್ರತಾಪಾಚಾರ್ಯರು ಕಟೀಲು ಶಿಕ್ಷಣಸಂಸ್ಥೆಯ ಹಳೆವಿದ್ಯಾರ್ಥಿಯಾಗಿರುವುದು ಉಲ್ಲೇಖನೀಯ. ಎಂದರು.

ಈ ಸಂದರ್ಭ ಕಲಾಕಾರ ಪ್ರತಾಪ್ ಆಚಾರ್ಯನನ್ನು ಶ್ರೀದೇವಿಯ ಶೇಷವಸ್ತ್ರ ನೀಡಿ ಗೌರವಿಸಲಾಯಿತು.ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಸದಾನಂದ ವೆಂಕಟೇಶ ಆಸ್ರಣ್ಣ, ಶ್ರೀಕರ ಆಸ್ರಣ್ಣ ಉಪಸ್ಥಿತರಿದ್ದರು .

Edited By : Nirmala Aralikatti
Kshetra Samachara

Kshetra Samachara

29/08/2021 10:41 pm

Cinque Terre

4.53 K

Cinque Terre

0