ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪಣಂಬೂರು: "ಗ್ರಾಮದ ಯೋಜನೆಗಳ ಅನುಷ್ಠಾನಕ್ಕೆ ಜಮಾಬಂದಿ ಪೂರಕ"

ಮುಲ್ಕಿ: ಗ್ರಾಮದ ಯೋಜನೆಗಳನ್ನು ಪಾರದರ್ಶಕ ಹಾಗೂ ಪ್ರಾಮಾಣಿಕತೆಯಿಂದ ಅನುಷ್ಠಾನ ಮಾಡಲು ಜಮಾಬಂದಿ ಪೂರಕ ಎಂದು ಮಂಗಳೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಹೇಳಿದ್ದಾರೆ.

ಪಡುಪಣಂಬೂರು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಪಂಚಾಯತಿಯ ಜಮಾಬಂದಿ ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿಯಾಗಿ ಮಾತನಾಡಿದರು. ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆ ವಹಿಸಿದ್ದರು.

ಪಿಡಿಒ ಪ್ರದೀಪ್ ಅರುಣ್ ಡಿಸೋಜಾ ಅವರು ಪಂಚಾಯತಿಯ ಪ್ರಸ್ತುತ ಸಾಲಿನ ಜಮಾ ಖರ್ಚುಗಳನ್ನು ಮಂಡಿಸಿ, ವಿವಿಧ ಅನುದಾನಗಳಿಂದ ಒಟ್ಟು 1.53 ಕೋ. ರೂ.ನಲ್ಲಿ 1.26. ಕೋ.ರೂ. ಖರ್ಚಾಗಿದ್ದು, 27 ಲಕ್ಷರೂ. ಉಳಿಕೆಯಾಗಿದೆ. ನರೇಗಾದಲ್ಲಿ 43 ಕಾಮಗಾರಿಗಳನ್ನು 13 ಲಕ್ಷ ರೂ. ಯೋಜನೆಯಲ್ಲಿ 32 ಕಾಮಗಾರಿಗಳನ್ನು 15.55 ಲಕ್ಷ ರೂ. ವೆಚ್ಚದಲ್ಲಿ ನಿರ್ವಹಿ ಸಲಾಗಿದೆ. ಪಂಚಾಯತಿಯ ಒಟ್ಟು 18 ವಿವಿಧ ಖಾತೆಗಳಲ್ಲಿ 27.19 ಲಕ್ಷ ರೂ. ವ್ಯವಹಾರ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರಾ.ಪಂ. ಉಪಾಧ್ಯಕ್ಷೆ ಕುಸುಮಾ ಚಂದ್ರಶೇಖರ್, ದಿನೇಶ್ ಶೆಟ್ಟಿ, ಪವಿತ್ರಾ, ನಮಿತಾ, ಹರಿಪ್ರಸಾದ್, ಅನಿಲ್ ಮೊದಲಾದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

25/08/2021 08:15 am

Cinque Terre

2.1 K

Cinque Terre

0

ಸಂಬಂಧಿತ ಸುದ್ದಿ