ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಮರವಂತೆ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಸಾಧನ ಸಮುದಾಯ ಭವನದಲ್ಲಿ ಜರುಗಿತು.

ವರದಿ :ದಾಮೋದರ ಮೊಗವೀರ ನಾಯಕವಾಡಿ

ಬೈಂದೂರು : ಮರವಂತೆ ಹಳೆವಿದ್ಯಾರ್ಥಿ ಸಂಘ (ರಿ.) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮರವಂತೆ ಇದರ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಇಂದು ಸಾಧನ ಸಮುದಾಯ ಭವನದಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರವಿ ಮಡಿವಾಳ ನೇತೃತ್ವ ವಹಿಸಿಕೊಂಡಿದ್ದರು.

ಗೌರವ ಉಪಸ್ಥಿತಿಯಲ್ಲಿ ಸಂಘದ ಗೌರವಾಧ್ಯಕ್ಷರಾದ ದಯಾನಂದ ಬಳೆಗಾರ್, ಗೌರವ ಸಲಹೆಗಾರಾದ ಊರಿನ ಹಿರಿಯರು ಆದ ಎಸ್.ಜನಾರ್ಧನ್ ಮರವಂತೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕರುಣಾಕರ್ ಆಚಾರ್ಯ, ಸಂಘದ ಕಾರ್ಯದರ್ಶಿಯಾದ ರಾಜೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಮಯದಲ್ಲಿ 2020-21 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಏಳನೇ ತರಗತಿಯ ಎರಡು ಮಾಧ್ಯಮದಲ್ಲಿ ಅತ್ಯುತ್ತಮ ಅಂಕ ಪಡೆದು ಪ್ರಥಮ ಹಾಗೂ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ * ಬಿ. ರಾಮಕೃಷ್ಣ ಮಾಲೂರು* ಇವರ ಕೊಡುಗೆಯಾಗಿ ವಿದ್ಯಾರ್ಥಿವೇತನ ವಿತರಣೆ ಮಾಡಲಾಯಿತು. ಸ್ವಾತಂತ್ರದ ಅಮೃತ ಮಹೋತ್ಸವದ ಸವಿನೆನಪಿಗಾಗಿ ನಮ್ಮೂರ ಪ್ರತಿಭಾನ್ವೇಷಣೆ ಅಂತರ್ಜಾಲದಲ್ಲಿ ಎನ್ನುವ ಸ್ಪರ್ಧೆಯನ್ನು ಕಿರಿಯ, ಹಿರಿಯ ಸಾರ್ವಜನಿಕ ಎನ್ನುವ ಮೂರು ವಿಭಾಗದಲ್ಲಿ ದೇಶಭಕ್ತಿ ಗೀತೆ ಮತ್ತು ಸ್ವಾತಂತ್ರ್ಯದ ಕುರಿತಾದ ವಿವಿಧ ವಿಷಯದ ಬಗ್ಗೆ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

ವಿಜ್ಞಾನ ಪ್ರಕಲ್ಪ ಆಧಾರಿತ ಪ್ರಬಂಧ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ನಮ್ಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿಗಳಾದ "ಕುಮಾರಿ ಶಿವಾನಿ ಪೂಜಾರಿ" ಮತ್ತು "ಅಪೇಕ್ಷಾ" ಇವರನ್ನು ಗುರುತಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸುಜಾತ ಹಾಗೂ ಸುನಿತಾ ಪ್ರಾರ್ಥನೆ ಮಾಡಿ, ಸಂತೋಷ ಮೊಗವೀರ ಸ್ವಾಗತಿಸಿದರು.

ವಿಶ್ವನಾಥ್ ಶಾನುಭಾಗ್ ತಿಳುವಳಿಕೆ ಪತ್ರ ಓದಿ, ಕಾರ್ಯದರ್ಶಿ ರಾಜೇಶ್ ಆಚಾರ್ಯ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.

ದೇವಿದಾಸ್ ಶಾನುಭಾಗ್ ಕಾರ್ಯಕ್ರಮ ನಿರೂಪಣೆ ಮಾಡಿ ಅಣ್ಣಪ್ಪ ಖಾರ್ವಿ ವಂದಿಸಿದರು. ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

23/08/2021 09:33 am

Cinque Terre

10.27 K

Cinque Terre

0

ಸಂಬಂಧಿತ ಸುದ್ದಿ