ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು : ಗಂಗೊಳ್ಳಿ ಬಂದರಿನಲ್ಲಿ ಮತ್ಸ್ಯ ಸಂಪತ್ತು ವೃದ್ಧಿಯಾಗಲಿ ಎಂದು ಸತ್ಯನಾರಾಯಣ ಪೂಜೆ .

ವರದಿ: ದಾಮೋದರ ಮೊಗವೀರ ನಾಯಕವಾಡಿ

ಬೈಂದೂರು :ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಕರಾವಳಿ ಭಾಗದಲ್ಲಿ ಋತು ಆರಂಭಕ್ಕೂ ಮುನ್ನ ಮುಂಬರುವ ದಿನಗಳಲ್ಲಿ ಮೀನುಗಾರಿಕೆಗೆ ಯಾವುದೇ ಅಡ್ಡಿ ಆತಂಕಗಳು ಹಾಗೂ ಹೇರಳ "ಮತ್ಸ್ಯ ಸಂಪತ್ತು" ವೃದ್ಧಿಯಾಗಲಿ ಯಾವುದೇ ಅವಘಡಗಳು ಪ್ರಕೃತಿಯ ವಿಕೋಪಗಳು ಉಂಟಾಗಿ ದಿರಲಿ ಎಂದು ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಕಂಚುಗೋಡು . ಇಂದು ಗಂಗೊಳ್ಳಿ ಬಂದರಿನಲ್ಲಿ ವಿಶೇಷ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು .

ಹೌದು ಮತ್ಸ್ಯ ಬೇಟೆಯ ಸಮಯದಲ್ಲಿ ಮೀನುಗಾರರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳು ಇರದೆ ಪರಸ್ಪರ ಏಕತೆ .ಸೌಹಾರ್ದದಿಂದ ಮೀನುಗಾರಿಕೆಯನ್ನು ನಡೆಸುವಂತೆ ಗಂಗಾಮಾತೆ ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು .

ಈ ಪುಣ್ಯ ಕಾರ್ಯಕ್ರಮದಲ್ಲಿ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಕಂಚುಗೋಡು ಗಂಗೊಳ್ಳಿ ಪರ್ಸಿನ್ ಬೋಟ್ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಖಾರ್ವಿ ಕರಾವಳಿ ಕಾವಲು ಪಡೆಯ ಪೊಲೀಸ್ ಠಾಣೆ ಸಿಬ್ಬಂದಿಗಳು ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಂಘದ ವ್ಯವಸ್ಥಾಪಕ ಮೋಹನ ಖಾರ್ವಿ ಹಾಗೂ ಸಿಬ್ಬಂದಿಗಳು ಗಂಗೊಳ್ಳಿ ಸಾರ್ವಜನಿಕರು ಉಪಸ್ಥಿತರಿದ್ದರು .

Edited By : Nagesh Gaonkar
Kshetra Samachara

Kshetra Samachara

17/08/2021 04:53 pm

Cinque Terre

9.82 K

Cinque Terre

0

ಸಂಬಂಧಿತ ಸುದ್ದಿ