ಮುಲ್ಕಿ:ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಮಾರ್ಗದರ್ಶನದಲ್ಲಿ ಫೇಮಸ್ ಯೂತ್ ಕ್ಲಬ್(ರಿ), 10ನೇ ತೋಕೂರು, ಹಳೆಯಂಗಡಿ ವತಿಯಿಂದ
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ವಾಲಿಬಾಲ್ ಲೀಗ್ "ಅಮೃತ ಮಹೋತ್ಸವ ಟ್ರೋಫಿ"ಪಂದ್ಯಾಟ ನಡೆಯಿತು.ಕಾರ್ಯಕ್ರಮವನ್ನುಮಾಜಿ ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು ಉದ್ಘಾಟಿಸಿದರು
ಸಂಸ್ಥೆಯ ನಾಲ್ಕು ತಂಡಗಳಾದ ಫೇಮಸ್ ಸ್ಟೈಕರ್ಸ್, ಫೇಮಸ್ ಸ್ಮ್ಯಾಶರ್ಸ್, ಫೇಮಸ್ ರಾಯಲ್ಸ್, ಫೇಮಸ್ ಅಟಾಕರ್ಸ್ ತಂಡಗಳು ಸೆಣಸಾಡಿತು. ಗ್ರಾ ಪಂ ಸದಸ್ಯರಾದ ಜ್ಯೋತಿ, ಉದ್ಯಮಿ ಪ್ರವೀಣ್ ಬೊಳ್ಳೂರು, ದಿನೇಶ್ ಬೆಳ್ಳಾಯರು, ಗಣೇಶ್ ಜಿ ಬಂಗೇರ, ದಿನಕರ ಸಾಲ್ಯಾನ್ , ನಾರಾಯಣ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ನೆಹರು ಯುವ ಕೇಂದ್ರ ಮಂಗಳೂರು ಯುವ ಸಮನ್ವಯಾಧಿಕಾರಿ ರಘುವೀರ ಸೂಟರ್ ಪೇಟೆ ವಿಜೇತರಿಗೆ ಟ್ರೋಫಿ ಮತ್ತು ನಗದು ಪುರಸ್ಕಾರವನ್ನು ನೀಡಿ ಮಾತನಾಡಿ "ಕ್ರೀಡೆ ಎಂಬುದು ಯುವಪೀಳಿಗೆಯ ಜೀವಾಳ,ಗ್ರಾಮೀಣ ಮಟ್ಟದಲ್ಲಿ ಕ್ರೀಡಾಕೂಟದ ಆಯೋಜನೆ ಶ್ಲಾಘನೀಯ ಎಂದರು
ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರ ಮಂಗಳೂರು ತಾಲೂಕು ಪ್ರತಿನಿಧಿ ನಾಗರಾಜ್, ಯಕ್ಷದೇಗುಲ ಹತ್ತು ಸಮಸ್ತರು 10ನೇ ತೋಕೂರು ಅಧ್ಯಕ್ಷ ಗಣೇಶ್ ಜಿ. ಬಂಗೇರ, ಪಡುಪಣಂಬೂರು ಗ್ರಾ ಪಂ ಸದಸ್ಯ ಮೋಹನ್ ದಾಸ್, ಸಂಸ್ಥೆಯ ಗೌರವಾಧ್ಯಕ್ಷ ಗುರುರಾಜ್ ಎಸ್. ಪೂಜಾರಿ, ಅಧ್ಯಕ್ಷ ಭಾಸ್ಕರ್ ಅಮೀನ್, ತೋಕೂರು ಫೇಮಸ್ ಯೂತ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು,
ಕ್ರೀಡಾಕೂಟದಲ್ಲಿ ಕ್ರೀಡಾಕೂಟದಲ್ಲಿ ಮಹಮ್ಮದ್ ಶರೀಫ್ ಮಾಲೀಕತ್ವದ ತಂಡ ಫೇಮಸ್ ಸ್ಟೈಕರ್ಸ್ ಪ್ರಥಮ ಸ್ಥಾನ, ಹಿಮಕರ್ ಕೋಟ್ಯಾನ್ ಮಾಲಕತ್ವದ ತಂಡ ಫೇಮಸ್ ಅಟಾಕರ್ಸ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಸಂಪತ್ ಜೆ. ಶೆಟ್ಟಿ ತೋಕೂರು ಗುತ್ತು ಕಾರ್ಯಕ್ರಮವನ್ನು ನಿರೂಪಿಸಿದರು.
Kshetra Samachara
16/08/2021 06:41 pm