ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಸ್ತೆ ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಿದಾತನಿಗೆ ಗಾಯಾಳುವಿನ ಗ್ರಾಮಸ್ಥರಿಂದ ಸನ್ಮಾನ

ಮಂಗಳೂರು: ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ವ್ಯಕ್ತಿಯ ನೆರವಿಗೆ ತಕ್ಷಣ ಧಾವಿಸಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ 'ಆಪದ್ಬಾಂಧವ'ನಿಗೆ ಗಾಯಾಳುವಿನ ಗ್ರಾಮದ ಜನತೆ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿರುವ ಅಪೂರ್ವ ಘಟನೆಗೆ ಕಟೀಲು ಸಮೀಪದ ಎಕ್ಕಾರು ಪರಿಸರ ಸಾಕ್ಷಿಯಾಯಿತು.

ಆಗಸ್ಟ್ 5 ರಂದು ಎಕ್ಕಾರು ಬಳಿಯ 'ಕಾಯ್ದಂಡ ಯುವಕ ಮಂಡಲ'ದ ಗೌರವಾಧ್ಯಕ್ಷ ಚಂದ್ರಶೇಖರ ರೈ ಎಂಬವರು ಅಪಘಾತಕ್ಕೊಳಗಾಗಿದ್ದಾರು. ಆದರೆ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವ ಇವರ ನೆರವಿಗೆ ಯಾರು ಮುಂದೆ ಬಂದಿರಲಿಲ್ಲ. ಆದರೆ ಈ ಸಂದರ್ಭ ಅದೇ ದಾರಿಯಾಗಿ ಬಜ್ಪೆ ಕಡೆಗೆ ತೆರಳುತ್ತಿದ್ದ ಕಿನ್ನಿಗೋಳಿಯ ಗುತ್ತಕಾಡು (ಶಾಂತಿನಗರ) ನಿವಾಸಿ ಮೊಹಮ್ಮದ್ ಶಫೀಕ್, ತಕ್ಷಣ ಗಾಯಾಳು ಚಂದ್ರಶೇಖರ ರೈಯವರನ್ನು ತಮ್ಮದೇ ಕಾರಿನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ತಕ್ಷಣ ವೈದ್ಯಕೀಯಸೌಲಭ್ಯ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ.

ಮೊಹಮ್ಮದ್ ಶಫೀಕ್ ಅವರ ಈ ಮಾನವೀಯ ಕಾಳಜಿಯನ್ನ ಗುರುತಿಸಿ ದಶಮಾನೋತ್ಸವದ ಸಂಭ್ರಮದಲ್ಲಿರುವ 'ಕಾಯ್ದಂಡ ಯುವಕ ಮಂಡಲ'ದ ವತಿಯಿಂದ ನಿನ್ನೆ ಎಕ್ಕಾರು ಗ್ರಾಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಇದು ಮಾತ್ರವಲ್ಲದೇ, ಶಫಿಕ್ ಅವರ ಆಹ್ವಾನದ ಮೇರೆಗೆ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಗುತ್ತಕಾಡು ಕೆಜೆಎಂ ಸಭಾ ಭವನದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಕಾಯ್ದಂಡ ಯುವಕ ಮಂಡಲದ ಹತ್ತಕ್ಕೂ ಅಧಿಕ ಮಂದಿ ಸದಸ್ಯರು ರಕ್ತದಾನ ಮಾಡುವ ಮೂಲಕ ತಾವೂ ಮಾದರಿಯಾದರು.

Edited By : Nagesh Gaonkar
Kshetra Samachara

Kshetra Samachara

16/08/2021 04:55 pm

Cinque Terre

14.94 K

Cinque Terre

2

ಸಂಬಂಧಿತ ಸುದ್ದಿ