ಕಾಪು : ಬ್ರಿಟೀಷರ ಸಂಕೋಲೆಯಿಂದ ಭಾರತವನ್ನು ಸ್ವಾತಂತ್ರ್ಯಗೊಳಿಸಲು ನಮ್ಮ ಪೂರ್ವಜರು ಮಾಡಿದ ತ್ಯಾಗವನ್ನು ನೆನಪಿಸಿಕೊಳ್ಳುವುದು ನಮ್ಮ ಅದ್ಯ ಕರ್ತವ್ಯವಾಗಿದೆ ಎಂದು ಎಸ್ಡಿಪಿಐ ಮುಖಂಡ ಹನೀಫ್ ಮೂಳೂರು ಹೇಳಿದರು.
ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಚ್ಚಿಲ ಪಂಚಾಯತ್ ಸಮಿತಿ ವತಿಯಿಂದ ಬ್ಲೂವೆವ್ಸ್ ಅಪಾರ್ಟ್ಮೆಂಟ್ ಮುಂಬಾಗ ನಡೆದ 75ನೇ ಸ್ವಾತಂತ್ರ್ಯ ದಿನಾಚರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ದೇಶಕ್ಕೆ ಸ್ವಾತಂತ್ರ ಸಿಕ್ಕಿ 75ವರ್ಷ ಕಳೆದರು ಆಡಳಿತ ಶಾಹಿ ವರ್ಗ ದೇಶದ ಪ್ರಜೆಗಳ ಪೌರತ್ವ ಪಶ್ನಿಸುವ ಹಂತಕ್ಕೆ ತಲುಪಿರುವುದು ಖಂಡಿತ ಬೇಸರ ಸಂಗತಿಯಾಗಿದೆ, ದೇಶದ ಸಂವಿಧಾನವನ್ನು ಅಳಿಸಲು ಹೋರಟಿರುವ ಮನುವಾದಿಗಳಿಂದ ಸಂವಿಧಾನದ ಆಶಯಗಳನ್ನು ಉಳಿಸಿದಾಗ ಮಾತ್ರ ದೇಶ ನಿಜವಾಗಿ ಸ್ವಾತಂತ್ರ್ಯವಾದಂತೆ ಎಂದರು.
ಎಸ್ಡಿಪಿಐ ಉಚ್ಚಿಲ ಪಂಚಾಯತ್ ಸಮಿತಿ ಅಧ್ಯಕ್ಷರಾದ ರಝಕ್ ವೈ.ಎಸ್. ಧ್ವಜಾರೋಹಣಾ ನೆರೆವೇರಿಸಿದರು.ಎಸ್ಡಿಪಿಐ ಜಿಲ್ಲಾ ಪ್ರದಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು.ತವಕ್ಕಲ್ ಯಂಗ್ ಮೇನ್ಸ್ ಅಧ್ಯಕ್ಷ ಅಬ್ದುಲ್ ರಜಾಕ್ ಮೊನಬ್ಬ,ಮಸ್ಜೀದ್-ಎ-ಹನಫ್ ಅಧ್ಯಕ್ಷ ಇಬ್ರಾಹಿಂ, ಸಯ್ಯದ್ ಅರಬಿ ಜುಮ್ಮಾ ಮಸೀದಿ ಅಧ್ಯಕ್ಷ ಉಸ್ಮಾನ್ ಕಟ್ಟಿಂಗೇರಿ, ಅಲ್-ಇಸ್ಲಾಮಿಯ ಯಂಗ್ ಮೇನ್ಸ್ ಅಧ್ಯಕ್ಷ ರಫೀಕ್ ಎಸ್.ಕೆ. ಇಬ್ರಾಹಿಮ್ ಕಲ್ಚರ್ ಸೆಂಟರ್ ಅಧ್ಯಕ್ಷ ಇಸ್ಮಾಯಿಲ್,ಪಿಎಫ್ಐ ಬ್ಲಡ್ ಡೊನರ್ ಫಾರಂ ಉಚ್ಚಿಲ ಕಾರ್ಯದರ್ಶಿ ಸಿರಾಜ್ ಎನ್.ಎಚ್.ಪಿಎಫ್ಐ ಉಚ್ಚಿಲ ಏರಿಯಾ ಅಧ್ಯಕ್ಷ ಇಬ್ರಾಹಿಮ್,ಎಸ್.ಡಿ.ಟಿ.ಯು ನವಾಜ್ ಸೂಫಿ, ಉದ್ಯಮಿ ಸಲೀಂ, ವೈವಾ ಸಂಸ್ಥಾಕರಾದ ಇಲ್ಯಾಸ್ ಎರ್ಮಾಳ್,ಗ್ರಾ.ಪಂ ಸದಸ್ಯರಾದ ರುಮಾನ ನವಾಜ್, ಅಸೀಫ್ ವೈ ಸಿ, ಮತ್ತುಸೌಲತ್ ಕಲೀಲ್ ಉಪಸ್ಥಿತರಿದ್ದರು.
Kshetra Samachara
15/08/2021 03:05 pm