ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಇಂದಿನ ಯುವಜನಾಂಗಕ್ಕೆ ಆಷಾಡ ಮಾಸದ ಮಹತ್ವವನ್ನು ತಿಳಿಸೋಣ": ಡಾ. ರಾಜಾರಾಮ್

ಮುಲ್ಕಿ: ಯುವವಾಹಿನಿ (ರಿ) ಮುಲ್ಕಿ ಘಟಕದ ವತಿಯಿಂದ 19ನೇ ವರ್ಷದ "ಆಟಿಡೊಂಜಿ ದಿನ" ಕಾರ್ಯಕ್ರಮ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮಂಗಳೂರು ಯುವವಾಹಿನಿ(ರಿ) ಕೇಂದ್ರ ಅಧ್ಯಕ್ಷರಾದ ಡಾ. ರಾಜಾರಾಮ್ ಕೆಬಿ ರವರು ಸಾಂಕೇತಿಕವಾಗಿ ವೇದಿಕೆಯಲ್ಲಿ ನಿರ್ಮಾಣಗೊಂಡ ಕೃತಕ ನೇಜಿ ಗದ್ದೆಯಲ್ಲಿ ಕಾಯರ್ ಮರ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿ ಆಷಾಡ ದಿನಗಳಲ್ಲಿ ಕಹಿ ಅನುಭವಗಳನ್ನು ನುಂಗಿ ಸಿಹಿ ಅನುಭವಗಳನ್ನು ಅನುಭವಿಸೋಣ. ಹಿಂದಿನ ಕಾಲದ ಜೀವನದ ಕಷ್ಟಗಳನ್ನು ಮರೆಯದೆ ಇಂದಿನ ಯುವಜನಾಂಗಕ್ಕೆ ತಿಳಿಸಿ ಆಷಾಡ ಮಾಸದ ಮಹತ್ವವನ್ನು ತಿಳಿಯೋಣ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಮುಲ್ಕಿ ಯುವವಾಹಿನಿ(ರಿ) ಘಟಕದ ಅಧ್ಯಕ್ಷ ಭರತೇಶ ಅಮೀನ್ ವಹಿಸಿದ್ದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಶಿವರಾಮ್ ಜಿ. ಅಮೀನ್, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ ಅಮೀನ್ ಕೊಕ್ಕರಕಲ್, ಕಾರ್ಯಕ್ರಮ ನಿರ್ದೇಶಕ ಭಾಸ್ಕರ ಸಿ ಕೋಟ್ಯಾನ್ ಕೊಕ್ರಾಣಿ, ಉದಯ ಅಮಿನ್ ಮಟ್ಟು, ಮಾಜೀ ಅಧ್ಯಕ್ಷ ಸತೀಶ್ ಕಿಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಸಾಧಕರ ನೆಲೆಯಲ್ಲಿ ರಂಗಕರ್ಮಿ ಹಾಗೂ ಪತ್ರಕರ್ತ ಪರಮಾನಂದ ಸಾಲ್ಯಾನ್ ಸಸಿಹಿತ್ಲು ರವರನ್ನು ಸನ್ಮಾನಿಸಲಾಯಿತು.

ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಉಪನ್ಯಾಸಕಿ ಅಕ್ಷತಾ ನವೀನ್ ಶೆಟ್ಟಿ ಎಡ್ಮೆಮಾರ್ "ಆಟಿದ ಮಹತ್ವ" ದ ಬಗ್ಗೆ ಉಪನ್ಯಾಸ ನೀಡಿದರು.ಯುವವಾಹಿನಿ ಮುಲ್ಕಿ ಘಟಕದ ಕಾರ್ಯದರ್ಶಿ ಚರಿಷ್ಮಾ ಶ್ರೀನಿವಾಸ್, ಧನ್ಯವಾದ ಅರ್ಪಿಸಿದರು.ನರೇಂದ್ರ ಕೆರೆಕಾಡು, ಮೋಹನ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.ವಿವಿಧ ಆಟಿದ ತಿನಿಸು ಭೋಜನಕೂಟ ನಡೆಯಿತು.

Edited By : Manjunath H D
Kshetra Samachara

Kshetra Samachara

13/08/2021 09:23 pm

Cinque Terre

8.03 K

Cinque Terre

0