ಮುಲ್ಕಿ: ಭಾರತ ಸರಕಾರ ದತೋಪಂತ ಠೇಂಗಡಿ ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ದ.ಕ.ಉಪ - ಪ್ರಾದೇಶಿಕ ನಿರ್ದೇಶನಾಲಯ ಮಂಗಳೂರು ಹಾಗೂ ಹಳೆಯಂಗಡಿ ಪ್ರಿಯದರ್ಶಿನಿ ಸಹಕಾರ ಸಂಘ (ರಿ) ಸಹಕಾರದೊಂದಿಗೆ ಅಸಂಘಟಿತ ಕಾರ್ಮಿಕರಿಗೆ ಎರಡು ದಿನಗಳ ಉಚಿತ ಕಾರ್ಯಾಗಾರ ಹಳೆಯಂಗಡಿ ಹರಿ ಓಂ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಿಯದರ್ಶಿನಿ ಸಹಕಾರಿ ಸಂಘದ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ ನೆರವೇರಿಸಿ ಮಾತನಾಡಿ ವಿದ್ಯೆಯಿಂದ ಮಹಿಳೆ ಸಾವಲಂಬಿ ಹಾಗೂ ಸದೃಢರಾಗಲು ಸಾಧ್ಯ, ಸಮಾಜದಲ್ಲಿ ಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯಹಸ್ತ ನೀಡುವುದು ಶ್ಲಾಘನೀಯ ಮಹಿಳೆಯರು ಸಂಘಟಿತರಾಗಲು ಕಾರ್ಯಾಗಾರ ಪೂರಕ ಎಂದರು.
ಮುಖ್ಯ ಅತಿಥಿಗಳಾಗಿ ಶಿಕ್ಷಣಾಧಿಕಾರಿ ಶಿವಬೋರಯ್ಯ, ಪ್ರಿಯದರ್ಶಿನಿ ಸಹಕಾರಿ ಸಂಘದ ಅಧ್ಯಕ್ಷ ವಸಂತ ಬೆರ್ನಾಡ್, ನಿರ್ದೇಶಕರಾದ ಉಮಾನಾಥ ಶೆಟ್ಟಿಗಾರ್, ಮಿರ್ಜಾ ಅಹಮದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಹಳೆಯಂಗಡಿ ಗ್ರಾಪಂ ಸದಸ್ಯರಾದ ಅಬ್ದುಲ್ ಅಜೀಜ್, ಪದ್ಮಾವತಿ ಶೆಟ್ಟಿ,ಅಬ್ದುಲ್ ಖಾದರ್, ನಿರಂಜಲ, ಮತ್ತಿತರರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಹರಿಣಾಕ್ಷಿ ರಾವ್, ರೇಖ ಲತಾ, ಶಾಂತಿ, ನಯನಾ ವಿಶ್ವನಾಥ್ ರವರು ಕ್ಯಾಂಡಲ್ ಸೋಪು, ಬಟ್ಟೆಯ ಕೈಚೀಲ ತಯಾರಿಕೆ ಬಗ್ಗೆ ಮಾಹಿತಿ ನೀಡಿದರು.
Kshetra Samachara
10/08/2021 11:35 am