ಮುಲ್ಕಿ: ಹಳೆಯಂಗಡಿ ಇಂಡಿಯನ್ ಯೋಗ ಮಂದಿರದಲ್ಲಿ ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟದ ವತಿಯಿಂದ “ಅಂತರಾಷ್ಟ್ರೀಯ ಸ್ನೇಹ ದಿನ ಹಾಗೂ ಆಟಿದ ಪೊರ್ಲು” ಕಾಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸಿಎಸ್ಐ ಚರ್ಚ್ ಕೃಷ್ಣಾಪುರದ ನಿವೃತ್ತ ಸಭಾಪಾಲಕರಾದ ರೆವೆ. ಐಸನ್ ಪಾಲನ್ ದೀಪ ಬೆಳಗಿಸಿ ಉದ್ಘಾಟಿಸಿ " ಸ್ನೇಹಕ್ಕೆ ತನ್ನದೇ ಆದ ಸ್ಥಾನಮಾನ, ಗೌರವ, ಆದರ, ಆತಿಥ್ಯವಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟದ ಅಧ್ಯಕ್ಷರಾದ ಡೇನಿಯಲ್ ದೇವರಾಜ್ ವಹಿಸಿ ಮಾತನಾಡಿ ಸ್ನೇಹ ದಿನ ಹಾಗೂ ಆಷಾಢಮಾಸದ ದಿನಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಸಿಎಸ್ ಐ ಚರ್ಚ್ ನ ಸಭಾ ಪಾಲಕರಾದ ರೆವೆ. ವಿನಯಲಾಲ್ ಬಂಗೇರ, ಪಾಸ್ಟರ್ ರಾಜೇಶ್ ಕೋಟ್ಯಾನ್, ಶಿಕ್ಷಕರಾದ ರಂಜನ್ ಜತ್ತನ್ನ ಕಾರ್ನಾಡು, ನ್ಯಾನ್ಸಿ ಕರ್ಕಡ ಉಪಸ್ಥಿತರಿದ್ದರು,
ಮುಲ್ಕಿ ಸಿ.ಎಸ್.ಐ ಯುನಿಟಿ ಚರ್ಚುನ ಸಭಾ ಪಾಲಕ ರೆವೆ. ಸ್ಟೀವನ್ ಸರ್ವೋತ್ತಮ, ರವರನ್ನು ಆಟಿದ ಪೊರ್ಲು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಆಟಿ ತಿಂಗಳ ಸುಮಾರು 16 ಬಗೆಯ ತಿನಿಸುಗಳನ್ನು ಭೋಜನಕೂಟದಲ್ಲಿ ಸವಿಯಲಾಯಿತು. ಶಾನ್ ಕರ್ಕಡ ಸ್ವಾಗತಿಸಿದರು. ಡಿಕ್ಸನ್ ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
03/08/2021 05:18 pm