ಮುಲ್ಕಿ: ಮುಲ್ಕಿಯ ತುಳುನಾಡ ಬಂಟ ಮಹಿಳಾ ಸಂಘದ ವತಿಯಿಂದ ಎರಡನೇ ವರ್ಷದ "ಆಟಿಡ್ ಒಂಜಿ ದಿನತ ಲೇಸ್" ಕಾರ್ಯಕ್ರಮ ಸಂಘದ ಅಧ್ಯಕ್ಷರಾದ ಶಮೀನ ಆಳ್ವ ರ ಕೆಂಚನಕೆರೆ ಬಳಿಯ ಮನೆಯಲ್ಲಿ ನಡೆಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಹಿರಿಯ ಸಮಾಜ ಸೇವಕಿ ಬಂಟರ ಮಹಿಳಾ ಸಂಘದ ಮಾಜೀ ಅಧ್ಯಕ್ಷೆ ಸಾವಿತ್ರಿ ಶೆಟ್ಟಿ ಮಾತನಾಡಿ ಮಹಿಳೆಯರು ಸಂಘಟಿತರಾದರೆ ಕೆಲಸ ಕಾರ್ಯಗಳು ಸಿದ್ಧಿಯಾಗುತ್ತದೆ ಎಂದು ಹೇಳಿ ಆಷಾಡ ದಿನಗಳ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಸಂಘದ ಅಧ್ಯಕ್ಷೆ ಶಮೀನ ಆಳ್ವ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯಅತಿಥಿಗಳಾಗಿ ನಿವೃತ್ತ ಶಿಕ್ಷಕಿ ಕೃಪಾ ಎ ಶೆಟ್ಟಿ ಜೆಪ್ಪು ಮಂಗಳೂರು, ಮಾತನಾಡಿದರು. ಸಂಘದ ಕಾರ್ಯದರ್ಶಿ ಕುಸುಮ ಆರ್ ಶೆಟ್ಟಿ, ಕೋಶಾಧಿಕಾರಿ ಹರಿಣಿ ಶೆಟ್ಟಿ, ಅಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ತುಳುನಾಡ ಗ್ರಾಮೀಣ ಸೊಗಡಿನ ಆಷಾಢಮಾಸದ ವಿವಿಧ ತಿಂಡಿ-ತಿನಿಸುಗಳ ಖಾದ್ಯವನ್ನು ತಯಾರಿಸಿ ಉಣಬಡಿಸಿದರು.
Kshetra Samachara
03/08/2021 03:17 pm