ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಜಿಲಮೊಗರು: ಯೋಗ ಶಿಬಿರ ಸಮಾರೋಪ

ಬಂಟ್ವಾಳ: ಅಜಿಲಮೊಗರು ಕೇಸರಿ ಯುವಕ ಮಂಡಲದಲ್ಲಿ ಜರುಗಿದ ಯೋಗ ಶಿಭಿರದ ಸಮಾರೋಪ ಸಮಾರಂಭ ನಡೆಯಿತು.

ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಯೋಗ ಸೇವಾ ಬಂಧು, ಬಂಟ್ವಾಳ ಆಶ್ರಯದಲ್ಲಿ ಹತ್ತು ದಿನಗಳ ಯೋಗವನ್ನು ಯೋಗ ಗುರು ವಾರಣಾಶಿ ಪ್ರಕಾಶಾನಂದ ನಡೆಸಿಕೊಟ್ಟರು ಕೊನೆಯ ದಿನ ತರಭೇತಿ ಪಡೆದವರಿಂದ ಗುರುನಮನ ಕಾರ್ಯಕ್ರಮ ನಡೆಯಿತು. ಸರಪಾಡಿ ಶ್ರೀ ಶರಭೇಶ್ವರ ಕ್ಷೇತ್ರದ ಪ್ರಧಾನ ಅರ್ಚಕರಾದ ಶಂಕರನಾರಾಯಣ ಹೊಳ್ಳ ಇವರು ಯೋಗ ಗುರುಗಳನ್ನು ಸನ್ಮಾನಿಸಿದರು.

ಸ್ಥಳೀಯರಾದ ಎ ಗಣೇಶ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮೋಹದಾಸ್ ಕೊಟ್ಟಾರಿ ಸಜಿಪ ಮುನ್ನೂರು, ವಿಶ್ವನಾಥ ಕೊಟ್ಟಾರಿ ಸಜಿಪ, ಕೇಸರಿ ಯುವಕ ಮಂಡಲ ಅಧ್ಯಕ್ಷ ಹರಿಪ್ರಕಾಶ ಶೆಟ್ಟಿ, ಪುರುಷೋತ್ತಮ ಪೂಜಾರಿ ಮಜಲು, ತಿಲಕ್ ಆಗರಗಂಡಿ, ಪ್ರಕಾಶ್ ಮೊದಲಾದವರಿದ್ದರು. ನಾಡಿ ಚಿಕಿತ್ಸೆ ಬಗ್ಗೆ ಕಾರ್ಕಳದ ರಾಜ್ ಪ್ರಸಾದ್ ಹೆಗ್ಡೆ ಮಾಹಿತಿ ನೀಡಿದರು.

Edited By : PublicNext Desk
Kshetra Samachara

Kshetra Samachara

02/08/2021 07:39 pm

Cinque Terre

3 K

Cinque Terre

1

ಸಂಬಂಧಿತ ಸುದ್ದಿ