ಉಡುಪಿ: ಯಕ್ಷಗಾನ‌ ಶೈಲಿಯ ರೈತ ಗೀತೆ ಕೇಳಿದಿರಾ!

ಉಡುಪಿ: ಉಡುಪಿಯಲ್ಲಿ ಪ್ರತಿಯೊಂದು ಕಾರ್ಯಕ್ರಮಕ್ಕೂ ಯಕ್ಷಗಾನದ ಸ್ಪರ್ಶ ಇದ್ದೇ ಇರುತ್ತದೆ.ಅದೇ ರೀತಿ ಯಾವುದೇ ಹಾಡುಗಳನ್ನೂ ಯಕ್ಷಗಾನ ಶೈಲಿಗೆ ಒಗ್ಗಿಸಿಕೊಳ್ಳುವ ಚಾಕಚಕ್ಯತೆ ಇಲ್ಲಿಯ ಯಕ್ಷಗಾನ‌ ಕಲಾವಿದರಿಗಿದೆ.ನಿನ್ನೆ ಶಾಸಕ ರಘುಪತಿ ಭಟ್ ಅವರ ಕಾರ್ಯಕ್ರಮದಲ್ಲಿ ಯಕ್ಷಗಾನ ಶೈಲಿಯ ರೈತ ಗೀತೆ ಅನುರಣಿಸಿದ್ದು ಯಕ್ಷಗಾನ ಪ್ರಿಯರನ್ನು ಪುಳಕಿತಗೊಳಿಸಿದೆ.

ನೀಲಾವರ ಕಳುವಿನಬೆಟ್ಟು ಬಳಿ ಹಡಿಲು ಭೂಮಿ ಕೃಷಿ ನಾಟಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ನೀಲಾವರ ಮೇಳದ ಭಾಗವತರಾದ ದೇವರಾಜ್ ದಾಸ್ ಮರವಂತೆ, ಶಿವಾನಂದ ಗುಲ್ವಾಡಿ -ಚೆಂಡೆ, ರಾಜಾರಾಮ ಹೆಗ್ಡೆ ಮಂದಾರ್ತಿ -ಮದ್ದಲೆ ಇವರಿಂದ ಯಕ್ಷಗಾನ ಶೈಲಿಯಲ್ಲಿ ರಾಜ್ಯದ ರೈತ ಗೀತೆ ತುಂಬ ಸೊಗಸಾಗಿ ಮೂಡಿ ಬಂದಿತ್ತು.ಈ ಗೀತೆಯೀಗ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.

Kshetra Samachara

Kshetra Samachara

2 months ago

Cinque Terre

14.98 K

Cinque Terre

1

  • B.R.NAYAK
    B.R.NAYAK

    ಈ ಹಿಂದೆ ಇಂತಹದೇ ಹಲವಾರು ಪ್ರಯೋಗ ಗಳು ಆಗಿವೆ.ಅದರಲ್ಲಿ ** ಸಾವಯವ ವಿಜಯ ** ಆಕಾಶವಾಣಿಯಲ್ಲಿ ತುಂಬಾ ಮೋಹಕವಾಗಿ ಮೂಡಿ ಮೋಡಿ ಮಾಡಿತ್ತು ಸಂಪೂರ್ಣ ಯಕ್ಷಗಾನ ಕಥೆ ಆಧಾರಿತ ಕಾರ್ಯ ಕ್ರಮವೇ ಆಗಿತ್ತು.. ಯಕ್ಷಗಾನ ,ಹಿಂದಿ,ಇಂಗ್ಲಿಷ್ ನಲ್ಲಿಯೂ ಮುಂಬೈ,ಜಪಾನ್,ಅಮೆರಿಕದಲ್ಲೂ ಪ್ರದರ್ಶನ ,ಪ್ರಯೋಗ ನಡೆಸಿದ ಶಿವರಾಮ ಕಾರಂತ ಕೊಡುಗೆ ಅನನ್ಯ.ಅಲ್ಲವೇ ?