ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ಆಶ್ರಯದಲ್ಲಿ ಕಾರ್ಗಿಲ್ ವಿಜಯೋತ್ಸವ

ಸುರತ್ಕಲ್: "ಕಳೆದ 7 ವರ್ಷಗಳಿಂದ ನಡೆಯುತ್ತಿರುವ ಕಾರ್ಗಿಲ್ ವಿಜಯೋತ್ಸವ 8ನೇ ವರ್ಷದಲ್ಲಿ ನಡೆಯುತ್ತಿದ್ದು ಜುಲೈ 26ರಂದು ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕೊರೋನಾ ಕಾಲದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ 13 ಸೈನಿಕ ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ವಿತರಣೆ ನಡೆಯಲಿದೆ" ಎಂದು ಸಂಘಟನೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾಹಿತಿ ನೀಡಿದರು.

"ಶಾಲೆ, ಕಾಲೇಜ್ ಯುವಕ ಯುವತಿಯರಿಗೆ ದೇಶಭಕ್ತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರಾರಂಭಗೊಂಡ ರಾಷ್ಟ್ರಭಕ್ತ ನಾಗರಿಕ ವೇದಿಕೆ ಪ್ರತೀ ಬಾರಿ ಸೈನಿಕರ ಸ್ಮರಣೆ, ಸನ್ಮಾನ ಮತ್ತು ಸೈನಿಕ ಕುಟುಂಬಗಳಿಗೆ ನೆರವು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಬಾರಿಯೂ 40 ಸೈನಿಕರಿಗೆ ಗೌರವಾರ್ಪಣೆ, 4 ಸೈನಿಕರಿಗೆ ಸನ್ಮಾನ, ಸೈನಿಕ ನಿಧಿ ಅರ್ಪಣೆ ಕಾರ್ಯಕ್ರಮ ನಡೆಯಲಿದೆ.

ಜು.26ರ ಸಂಜೆ 6 ಗಂಟೆಗೆ ಇಡ್ಯಾ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಐ. ರಮಾನಂದ ಭಟ್, ಐ ಓ ಎಂ ಪಿ ಎಲ್ ನಿವೃತ್ತ ಕಾರ್ಯ ನಿರ್ವಹಣಾಧಿಕಾರಿ ಎಸ್.ಎಸ್. ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಭೂಸೇನಾ ಯೋಧ ನಾಯಕ್ ಪ್ರವೀಣ್ ಕುಮಾರ್ ಶೆಟ್ಟಿ, ಕಿಶನ್ ಕುಮಾರ್ ರಾವ್, ಸಿಪಿಓ ವಿಜಯನ್ ಕೆ., ವಾಯುಸೇನಾ ಯೋಧ ಅರವಿಂದ್ ಭಟ್ ಸನ್ಮಾನ ಸ್ವೀಕರಿಸಲಿದ್ದಾರೆ.

ಕಾರ್ಗಿಲ್ ಯುದ್ಧದಲ್ಲಿ ಆಪರೇಷನ್ ವಿಜಯ್ ಮತ್ತು ಆಪರೇಷನ್ ವಿಜಯ್ ಸ್ಟಾರ್ ನಲ್ಲಿ ಮುಂಚೂಣಿಯಲ್ಲಿ ಭಾಗವಹಿಸಿ ಕಾರ್ಗಿಲ್ ವಾರ್ ಮೆಡಲ್ ಪುರಸ್ಕೃತರಾದ ನಾಯಕ್ ಪ್ರವೀಣ್ ಕುಮಾರ್ ಶೆಟ್ಟಿ ಕಾರ್ಗಿಲ್ ಯುದ್ಧದಲ್ಲಿ ತಾವು ಭಾಗವಹಿಸಿದ್ದ ನೆನಪನ್ನು ಬಿಚ್ಚಿಡಲಿದ್ದಾರೆ" ಎಂದು ಸತ್ಯಜಿತ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಯಶಪಾಲ್ ಸಾಲಿಯಾನ್, ಲೊಕೇಶ್ ಕೋಡಿಕೆರೆ, ಪ್ರಧಾನ ಕಾರ್ಯದರ್ಶಿ ಮಹೇಶ್ ಮೂರ್ತಿ ಸುರತ್ಕಲ್, ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಮತ್ತಿತರರು ಉಪಸ್ಥಿತರಿದ್ದರು.

Kshetra Samachara

Kshetra Samachara

3 years ago

Cinque Terre

5.93 K

Cinque Terre

0

ಸಂಬಂಧಿತ ಸುದ್ದಿ