ಕಾಪು: ಶಂಕರಪುರ ದ್ವಾರಕಾಮಾಯಿ ಸಾಯಿಬಾಬಾ ಮಂದಿರ ಪ್ರತಿಷ್ಠೋತ್ಸವ ಸಂಪನ್ನ

ಕಾಪು: ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ಧಾರಗೊಂಡ ಶಂಕರಪುರ ದ್ವಾರಕಾಮಾಯಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸುಬ್ರಹ್ಮಣ್ಯ ಶ್ರೀ ಮುಖ್ಯಪ್ರಾಣ ದೇವರ ಸಹಿತ ಶ್ರೀ ದ್ವಾರಕಾಮಾಯಿ ಸಾಯಿಬಾಬಾ ಮತ್ತು ಧನ್ವಂತರಿ ಸಾಯಿಬಾಬಾ ಮೂರ್ತಿ ಪ್ರತಿಷ್ಠಾ ಮಹೋತ್ಸವ ಸಾಯಿ ದರ್ಬಾರ್ ಕ್ಷೇತ್ರ ಧರ್ಮದರ್ಶಿ ಗುರೂಜಿ ಸಾಯಿ ಈಶ್ವರ್ ನೇತೃತ್ವದಲ್ಲಿ ಸಂಪನ್ನಗೊಂಡಿತು.

ವೇದಮೂರ್ತಿ ದೇವದಾಸ್ ತಂತ್ರಿ ಮುಂಬೈ ನೇತೃತ್ವದಲ್ಲಿ ಬನ್ನಂಜೆ ದಯಾಕರ್ ಭಟ್ ಪೌರೋಹಿತ್ಯದಲ್ಲಿ ಗಣಪತಿ ಹೋಮ,ಮೂರ್ತಿ ಪ್ರತಿಷ್ಠೆ, ಕಲಶಾಭಿಷೇಕ, ಮಹಾಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಈ ಸಂದರ್ಭ ಜಿಲ್ಲೆಯ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಅನ್ನ ಪ್ರಸಾದ ವಿತರಿಸಲಾಯಿತು.

Kshetra Samachara

Kshetra Samachara

6 days ago

Cinque Terre

5.67 K

Cinque Terre

0