ಉಡುಪಿ: ಅಯೋದ್ಯೆ ರಾಮ ಮಂದಿರ ವಿವಾದಿತ ಕ್ಷೇತ್ರ ಎಂದಿರುವ ಸಿದ್ಧರಾಮಯ್ಯಗೆ ಉಡುಪಿಯ ಪಲಿಮಾರುಮಠದ ವಿದ್ಯಾಧೀಶ ಶ್ರೀಗಳು ತಿರುಗೇಟು ನೀಡಿದ್ದಾರೆ. ಉಡುಪಿಯ ಸಮಾರಂಭವೊಂದರಲ್ಲಿ ಮಾತನಾಡುವ ವೇಳೆ, ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ನ್ಯಾಯಾಲಯದ ಆದೇಶವನ್ನು ಒಪ್ಪುತ್ತಿಲ್ಲ ಎಂದರೆ ನಾಚಿಕೆಗೇಡು.ರಾಮಮಂದಿರಕ್ಕೆ ಬೇಕಾದ ಎಲ್ಲಾ ಸಾಕ್ಷಿಗಳನ್ನು ಭೂಗರ್ಭದಿಂದ ಪಡೆಯಲಾಗಿದೆ.
ಕೆ ಕೆ ಮಹಮ್ಮದ್ ಅವರ ನೇತೃತ್ವದಲ್ಲಿ ಉತ್ಖನನ ನಡೆದು ಸಾಕ್ಷಿಗಳು ಕಣ್ಣ ಮುಂದಿವೆ.ಕೆಲ ಜನನಾಯಕರು ಮಂದಿರಕ್ಕೆ ಹತ್ತು ರೂಪಾಯಿ ಕೊಡಬೇಕಿದ್ದರೆ, ಭೂಮಿ ವಿವಾದಗ್ರಸ್ತ ಎನ್ನುತ್ತಿದ್ದಾರೆ.ರಾಮಮಂದಿರ ಇದ್ದ ಬಗ್ಗೆ ಎಲ್ಲಾ ಪುರಾವೆಗಳನ್ನು ನ್ಯಾಯಾಲಯಕ್ಕೆ ನೀಡಲಾಗಿದೆ..ಐವರು ನ್ಯಾಯಾಧೀಶರು ಸೇರಿ ತೀರ್ಪು ನೀಡಿದ್ದಾರೆ.
ಅದರಲ್ಲೂ ಓರ್ವ ಮುಸ್ಲಿಂ ಸಮಾಜದ ನ್ಯಾಯಾಧೀಶರೇ ಇದ್ದರು. ಆದರೂ ಓರ್ವ ವಕೀಲರಾಗಿರುವ ಜನನಾಯಕ ಈ ತೀರ್ಪನ್ನು ಒಪ್ಪುತ್ತಿಲ್ಲ.ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಚೆಂಬಲ್ ಕಣಿವೆಯ ಡಕಾಯತರಿಗಿಂತಲೂ ಇಂತಹಾ ಜನನಾಯಕರು ಅಪಾಯಕಾರಿ ಎಂದಿದ್ದಾರೆ.
Kshetra Samachara
28/02/2021 07:25 pm