ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಶಿಮಂತೂರು ದೇವಸ್ಥಾನದಲ್ಲಿ ಬಲಿ ಉತ್ಸವದ ಭಕ್ತಿ ಸಂಭ್ರಮ; ಇಂದು ಚಂಡಿಕಾ ಯಾಗ

ಮುಲ್ಕಿ: ಮುಲ್ಕಿ ಸಮೀಪದ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಧ್ವಜಾರೋಹಣದ ದಿನದಂದು ರಾತ್ರಿ ಉತ್ಸವ ಬಲಿ ಭಕ್ತಿ ಸಂಭ್ರಮದಿಂದ ನಡೆಯಿತು.

ದೇವಸ್ಥಾನದಲ್ಲಿ ರಾತ್ರಿ ಉತ್ಸವ ಬಲಿ, ಚಂದ್ರಮಂಡಲ ರಥೋತ್ಸವ, ವಸಂತ ಮಂಟಪದಲ್ಲಿ ಶ್ರೀ ದೇವರ ಪೂಜೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸಾಲಿಗ್ರಾಮ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಯವರಿಂದ "ಬಿಚ್ಚುಗತ್ತಿ ಭರಮಣ್ಣ" ಯಕ್ಷಗಾನ ಬಯಲಾಟ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ, ಶನಿವಾರ(ಇಂದು) ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದಲ್ಲಿ ಚಂಡಿಕಾ ಯಾಗ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಸಾಯಂಕಾಲ ನಾಲ್ಕು ಗಂಟೆಗೆ ಬಲಿ ಹಾಗೂ ಶ್ರೀ ದೇವರ ಪಂಜಿನಡ್ಕ ಸವಾರಿ ನಡೆಯಲಿದೆ ಎಂದರು.

ಈ ಸಂದರ್ಭ ಪಂ.ಸದಸ್ಯೆ ಪದ್ಮಿನಿ ಶೆಟ್ಟಿ, ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಹರೀಶ್ ಶೆಟ್ಟಿ, ದಿನೇಶ್ಚಂದ್ರ ಅಜಿಲ, ಶೇಖರ, ಮುಲ್ಕಿ ಠಾಣೆ ಎಎಸ್ಸೈ ಚಂದ್ರಶೇಖರ, ಉದಯಕುಮಾರ್ ಶೆಟ್ಟಿ ಆದಿ ಧನ್ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

27/02/2021 08:04 am

Cinque Terre

6.47 K

Cinque Terre

0

ಸಂಬಂಧಿತ ಸುದ್ದಿ