ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಅಸಹಾಯಕರಿಗೆ ಸಹಾಯಹಸ್ತ ಚಾಚಿ ಸಮಾಜದಲ್ಲಿ ಗುರುತಿಸಿಕೊಳ್ಳಿ"

ಮುಲ್ಕಿ: ಹೊಸ ಅಂಗಣ ಮಾಸಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ ಮುಲ್ಕಿಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಹಿಸಿ ಮಾತನಾಡಿ, ಜೀವನದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯಹಸ್ತ ನೀಡುವುದರ ಮೂಲಕ ಪುಣ್ಯವಂತರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಿ ಎಂದರು.

ಮುಖ್ಯಅತಿಥಿಗಳಾಗಿ ಮುಲ್ಕಿ ನ. ಪಂ. ಸದಸ್ಯ ಬಾಲಚಂದ್ರ ಕಾಮತ್, ಮುಂಬೈ ಸಾಹಿತಿ ಕೆ.ಎಂ. ಕೋಟ್ಯಾನ್ ಚಿತ್ರಾಪು, ಮುಲ್ಕಿ ಬಿಲ್ಲವ ಸಂಘ ಅಧ್ಯಕ್ಷ ರಮೇಶ್ ಕೊಕ್ಕರಕಲ್, ರಾಷ್ಟ್ರೀಯ ಬಿಲ್ಲವರ ಮಂಡಲ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕುಬೆವೂರು, ಉದ್ಯಮಿ ವಾಸು ಪೂಜಾರಿ ಚಿತ್ರಾಪು, ದರ್ಶನ ಪಾತ್ರಿ ಯಾದವ ಪೂಜಾರಿ,ಹೊಸ ಅಂಗಣ ಪತ್ರಿಕೆ ಸಂಪಾದಕ ಡಾ. ಹರಿಶ್ಚಂದ್ರ ಪಿ.ಸಾಲಿಯಾನ್, ಮುಲ್ಕಿ ರೋಟರಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ರವಿಚಂದ್ರ ಮಾಜಿ ಸದಸ್ಯ ಉಮೇಶ್ ಮಾನಂಪಾಡಿ, ಸತೀಶ್ ಮಾನಂಪಾಡಿ, ಶೇಷಪ್ಪ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಹೊಸ ಅಂಗಣ ಮಾಸ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು ಹಾಗೂ ದೈವಾರಾಧನೆ ಕಾಯಕದ ಕೃಷ್ಣಪ್ಪ ಸನಿಲ್ ಮಾನಂಪಾಡಿ ಅವರನ್ನು ಗೌರವಿಸಲಾಯಿತು. ಡಾ.ಹರಿಶ್ಚಂದ್ರ ಸಾಲ್ಯಾನ್ ಸ್ವಾಗತಿಸಿದರು. ರವಿಚಂದ್ರ ನಿರೂಪಿಸಿದರು.

Edited By : Manjunath H D
Kshetra Samachara

Kshetra Samachara

26/02/2021 02:07 pm

Cinque Terre

15.01 K

Cinque Terre

0

ಸಂಬಂಧಿತ ಸುದ್ದಿ