ಮಂಗಳೂರು: ಬಂಟ್ವಾಳ ತಾಲೂಕಿನ ಬಿಸಿರೋಡ್ ಗೊಲ್ಡನ್ ಪಾಕ್೯ ಮೈದಾನದಲ್ಲಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಬೆಂಗಳೂರು ಹಾಗೂ ಚಿಣ್ಣರಲೋಕ ಮೊಕೆದಾ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ಕೃಷಿ ಉತ್ಸವ & ಕರಾವಳಿ ಕಲೋತ್ಸವ ಕಾರ್ಯಕ್ರಮದಲ್ಲಿ ನಿರಾಶ್ರಿತರ ಸೇವಾ ಬಂಧು ಯೋಜನೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಹಾಗೂ ವೆಬ್ ಸೈಟ್ ಬಿಡುಗಡೆಯನ್ನು ಮಕ್ಕಳ ಹಾಗೂ ಮಹಿಳಾ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಗಾಯತ್ರಿ ರವೀಂದ್ರ ನೇರೆವೆರಿಸಿದ್ರು,ಈ ವೇಳೆ ಗೊಲ್ಡನ್ ಪಾಕ್ ಮೈದಾನದ ಮುಖ್ಯಸ್ಥರಾದ ಅಜಿತ್ ಕುಮಾರ್ ಬರಿಮಾರ್ ಅವರನ್ನು ಸನ್ಮಾನಿಸಲಾಯಿತು, ಹಾಗೂ ಕಲೋತ್ಸವ ಯಶಸ್ವಿಗೆ ಶ್ರಮಿಸಿದ ಇನ್ನಿತರರನ್ನು ಕಲೋತ್ಸವ ವೇದಿಕೆಯಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗೊಲ್ಡನ್ ಪಾಕ್೯ ಮೈದಾನದ ಮುಖ್ಯಸ್ಥರಾದ ಅಜಿತ್ ಕುಮಾರ್ ಬರಿಮಾರ್, ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್,ಚಿಣ್ಣರಲೋಕ ಸ್ಥಾಪಕರಾದ ಮೋಹನ್ ದಾಸ ಕೊಟ್ಟಾರಿ ಮುನ್ನೂರು,ಶಿಕ್ಷಣ ಸಂಯೋಜಕರಾದ ಸುಧಾ,ರಂಗಭೂಮಿ ಕಲಾವಿದ ಮಂಜು ವಿಟ್ಲ,ನಿರಾಶ್ರಿತರ ಸೇವಾ ಬಂಧು ಸದಸ್ಯ ಫಾರೂಕ್ ಬಂಟ್ವಾಳ, ನವೀನ್, ಇಬ್ರಾಹಿಂ, ಮಹಮ್ಮದ್ ನಂದಾವರ,ಸೌಮ್ಯ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು..
Kshetra Samachara
25/02/2021 09:25 am