ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸ್ತಂಭವನ್ನೇ ಅಲುಗಾಡಿಸಿದ ಮಹಿಷಾಸುರ!; ಸ್ತಂಭೀಭೂತರಾದ ಯಕ್ಷರಸಿಕರು

ಉಡುಪಿ: ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿ ಜಿಲ್ಲೆಗಳಲ್ಲಿ ಸಿನಿಮಾ ಕ್ರೇಜ್ ಕಡಿಮೆ ಎನ್ನಬಹುದು.

ಆದರೆ, ಯಕ್ಷಗಾನ ಎಂದ ಕೂಡಲೇ ಇಲ್ಲಿನ ಜನರು ಹರ್ಷಚಿತ್ತರಾಗಿ ನಿದ್ದೆ ಬಿಟ್ಟಾದರೂ ಕೂರ್ತಾರೆ!

ಅದಕ್ಕೆ ಪೂರಕವಾಗಿ ಯಕ್ಷಗಾನ ಕಲಾವಿದರು ಕೂಡ ಯಕ್ಷ ರಸಿಕರನ್ನು ಮೆಚ್ಚಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಇದೀಗ ಅಂಥದೇ ಪ್ರೇಕ್ಷಕರ ಮನಸೂರೆಗೊಂಡ ಯಕ್ಷಗಾನದ ರೋಚಕ ದೃಶ್ಯಾವಳಿ ಕರಾವಳಿ ಯಾದ್ಯಂತ ವೈರಲ್ ಆಗುತ್ತಿದೆ.

ಹೆಸರಾಂತ ಪೆರ್ಡೂರು ಯಕ್ಷಗಾನ ಮೇಳ ಆಡಿದ ಜನಪ್ರಿಯ 'ದೇವಿ ಮಹಾತ್ಮೆ' ಪ್ರಸಂಗದ ಪ್ರಧಾನ ನೋಟವಿದು. ಅದೇನೆಂದರೆ ಮೈಮನ ನವಿರೇಳಿಸುವ 'ಮಹಿಷಾಸುರ ವಧೆ' ವೀಡಿಯೊ.

ಯಕ್ಷಗಾನ ಕಲಾವಿದ ನಂದೀಶ್ ಜನ್ನಾಡಿ ಅವರು ಹಾಕಿದ ಮಹಿಷಾಸುರನ ವೇಷಭೂಷಣ, ನೃತ್ಯ ವೈವಿಧ್ಯ, ರೋಷಾವೇಶ ಸಾಂಪ್ರದಾಯಿಕ ಶೈಲಿಗಿಂತ ಕೊಂಚ ಭಿನ್ನವಾಗಿ ಕಾಣಿಸಿಕೊಂಡಿದ್ದು, ಯಕ್ಷ ರಸಿಕರ ಮನ ತಟ್ಟುವಲ್ಲಿ ಯಶಸ್ವಿಯಾಗಿದೆ.

ಸಾಮಾನ್ಯವಾಗಿ ಸುತ್ತಮುತ್ತ ಬೆಂಕಿ ಹಾಕಿ ಅದರ ಮಧ್ಯದಿಂದ ಅಗ್ನಿಯುಗುಳುತ್ತಾ ಆರ್ಭಟಿಸಿ, ಬೊಬ್ಬಿರಿಯುತ್ತಾ ಧಾವಿಸುವ ಮಹಿಷಾಸುರನ ಪ್ರವೇಶವಾಗುತ್ತದೆ. ಆದರೆ, ಇಲ್ಲಿ ಪಾತ್ರಕ್ಕೆ ಇನ್ನಷ್ಟು ಮೆರುಗು ನೀಡಲು 'ಮಹಿಷಾಸುರ' ತನ್ನ ಶಕ್ತಿ ಸಾಮರ್ಥ್ಯ, ವೀರತ್ವ ಪ್ರದರ್ಶಿಸಲು ರಂಗಸ್ಥಳದ ಕಂಬಕ್ಕೆ ತನ್ನ ಗಟ್ಟಿಮುಟ್ಟಾದ ಕೊಂಬಿನಿಂದ ಜೋರಾಗಿ ಡಿಕ್ಕಿ ಹೊಡೆದು ನರ್ತಿಸಿ, ಆದಷ್ಟು ವಾಸ್ತವತೆಯ ಚಿತ್ರಣಕ್ಕೆ ಪ್ರಯತ್ನಿಸಿರುವುದು ಯಕ್ಷ ಪ್ರೇಮಿಗಳಿಗೆ ಮುದ ನೀಡುತ್ತದೆ. ಸದ್ಯ, ಈ ವಿಭಿನ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Edited By : Nagesh Gaonkar
Kshetra Samachara

Kshetra Samachara

24/02/2021 11:39 am

Cinque Terre

20.59 K

Cinque Terre

2