ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಎನ್ ಎಸ್ ಎಸ್ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಉದ್ಘಾಟನೆ...

ಮಂಗಳೂರು : ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ನಂತೂರು ಪದುವ ಕಾಲೇಜ್ ಸಹಯೋಗದಲ್ಲಿ ಎನ್‌ಎಸ್‌ಎಸ್ ರಾಷ್ಟ್ರೀಯ ಇಂಟಗ್ರೇಷನ್ ಕ್ಯಾಂಪ್‌ನ ಉದ್ಘಾಟನಾ ಸಮಾರಂಭ ನಂತೂರು ಪದುವಾ ಕಾಲೇಜ್‌ನ ಸಭಾಂಗಣದಲ್ಲಿ ನಡೆಯಿತು.

ಕ್ಯಾಂಪ್ ಉದ್ಘಾಟಿಸಿ ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿ, ಈ ಕ್ರೂರ ಸಮಾಜದಲ್ಲಿ ಎಲ್ಲರನ್ನು ಎದುರಿಸಿ ಬದುಕಲು ಯಶಸ್ಸು ಹಾಗೂ ಧೈರ್ಯ ಮುಖ್ಯವಾಗಿದೆ ಅಂತಹ ದಾರಿಯಲ್ಲಿ ಸಾಗಲು ಈ ರೀತಿಯ ಕ್ಯಾಂಪ್‌ಗಳು ನೆರವಾಗುತ್ತವೆ ಎಂದರು..

ಮಂಗಳೂರು ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ.ಪಿಎಸ್ ಯಡಪಡಿತ್ತಾಯ ಮಾತನಾಡಿ, ಜೀವನದಲ್ಲಿ ಸಾಧನೆ ತುಂಬಾ ಮುಖ್ಯ ಟೀಕೆಗಳಿಗೆ ನಾವು ಬಗ್ಗಬಾರದು ರಿಯಕ್ಟ್ ಮಾಡುವ ಬದಲು ಉತ್ತಮ ರೀತಿಯಲ್ಲಿ ರೆಸ್ಪಾಂಡ್ ಮಾಡಬೇಕು. ಎನ್‌ಎಸ್‌ಎಸ್ ಕ್ಯಾಂಪ್‌ ವಿವಿಧತೆಯಲ್ಲಿ ಏಕತೆಯನ್ನು ಕಲಿಸುವುದರ ಜತೆಗೆ ಜೀವನದ ಹಾದಿಗೂ ಸೂಕ್ತ ಮಾರ್ಗದರ್ಶನವನ್ನು ಒದಗಿಸುವಂತಾಗಲಿ ಎಂದರು.ಈ ಸಂದರ್ಭದಲ್ಲಿ ನಿಕಟ ಪೂರ್ವ ಸಂಯೋಜನ ಅಧಿಕಾರಿ ಪ್ರೊ.ವಿನೀತ ರೈ ಅವರನ್ನು ಸನ್ಮಾನಿಸಲಾಯಿತು.

ಮಾ.1 ರವರೆಗೆ ಈ ಶಿಬಿರವು ನಡೆಯಲಿದೆ...

Edited By : Nagesh Gaonkar
Kshetra Samachara

Kshetra Samachara

24/02/2021 10:53 am

Cinque Terre

8.56 K

Cinque Terre

0

ಸಂಬಂಧಿತ ಸುದ್ದಿ