ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಜಾತ್ರಾ ಸಮಯದಲ್ಲಿ ಸಸಿಹಿತ್ಲು ಭಗವತಿ ದೇವಿಯು ಬಂದು ತಂ ಗುತ್ತಿರುವ ಶ್ರೀ ಭಗವತಿ ದೇವಿಯ ನೂತನ ತಂಗುದಾಣದ ಉದ್ಘಾಟನಾ ಸಮಾರಂಭ ನಡೆಯಿತು.
ತಂಗುದಾಣವನ್ನು ಶಾಸಕ ಉಮಾನಾಥ ಕೋಟ್ಯಾನ್ ನೆರವೇರಿಸಿದರು. ಬಳಿಕ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಮುಲ್ಕಿ ಸೀಮೆ ಅರಸರು ಹಾಗೂ ದೇವಳದ ಅನುವಂಶಿಕ ಮೊಕ್ತೇಸರರಾದ ದುಗ್ಗಣ್ಣ ಸಾವಂತರು ವಹಿಸಿ ಮಾತನಾಡಿ ಶ್ರೀ ಕ್ಷೇತ್ರ ಬಪ್ಪನಾಡು ಸರ್ವಧರ್ಮ ಬಾಂಧವರ ಕ್ಷೇತ್ರವಾಗಿದ್ದು ಸಸಿಹಿತ್ಲು ಭಗವತಿ ಕ್ಷೇತ್ರ ದೊಡನೆ ಅವಿನಾಭಾವ ಸಂಬಂಧ ಹೊಂದಿದ್ದು ದಾನಿ ನಾರಾಯಣ ಶೆಟ್ಟರು ನಿರ್ಮಿಸಿದ ತಂಗುದಾಣ ದ ಇತರರಿಗೆ ಪ್ರೇರಣೆಯಾಗಲಿ ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ ಮಾತನಾಡಿ ದೇವರ ದಯೆ, ಗುರುಹಿರಿಯರ ಆಶೀರ್ವಾದ ದಾನಿಗಳ ನೆರವಿನಿಂದ ದೇವಳಗಳ ಜೀರ್ಣೋದ್ದಾರ ಸಾಧ್ಯ ಎಂದರು. ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಬಪ್ಪನಾಡು ಬ್ರಹ್ಮಕಲಶೋತ್ಸವ ಸಮಿತಿಯ ಕಿಲ್ಪಾಡಿ ಭಂಡಸಾಲೆ ಶೇಖರ ಶೆಟ್ಟಿ,ಮುಲ್ಕಿ ನ. ಪಂ. ಅಧ್ಯಕ್ಷ ಸುಭಾಷ್ ಶೆಟ್ಟಿ ಉಪಾಧ್ಯಕ್ಷ ಸತೀಶ್ ಅಂಚನ್, ಪ್ರಧಾನ ಕಾರ್ಯದರ್ಶಿ ಸುನಿಲ್ ಆಳ್ವ, ಪಾಂಡುರಂಗ ಶೆಟ್ಟಿ ಬಪ್ಪನಾಡುಗುತ್ತು, ಮುರಳಿಧರ ಭಂಡಾರಿ ಕುಬೆವೂರು, ಸಸಿಹಿತ್ಲು ಭಗವತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ, ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ, ಇಂಜಿನಿಯರ್ ಜೀವನ್ ಶೆಟ್ಟಿ ಕಾರ್ನಾಡು, ಡಾ. ಹರಿಶ್ಚಂದ್ರ ಸಾಲಿಯಾನ್, ನಾಗಸ್ವರ ವಾದಕ ನಾಗೇಶ್ ಬಪ್ಪನಾಡು, ಮಹೀಮ್ ಹೆಗ್ಡೆ, ,ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಭಗವತಿ ತಂಗುದಾಣದ ಸಂಪೂರ್ಣ ವೆಚ್ಚವನ್ನು ಕೊಡುಗೆಯಾಗಿ ನೀಡಿದ ದಾನಿ ಬೆಂಗಳೂರಿನ ಶ್ರೀ ನಾರಾಯಣ ಶೆಟ್ಟಿ ರವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿ ನಾರಾಯಣ ಶೆಟ್ಟರು ಮಾತನಾಡಿ ಶ್ರದ್ಧಾ ಭಕ್ತಿಯಿಂದ ದೇವರನ್ನು ಪೂಜಿಸಿದರೆ ಫಲಪ್ರಾಪ್ತಿಯಾಗುತ್ತದೆ. ಭಕ್ತರ ಸಹಕಾರದಿಂದ ಎಲ್ಲವೂ ಸಾಧ್ಯ ಎಂದು ಗದ್ಗದಿತರಾಗಿ ಹೇಳಿದರು. ರಾಜೇಂದ್ರ ಎಕ್ಕಾರು ಸ್ವಾಗತಿಸಿದರು. ನ್ಯಾಯವಾದಿ ಭಾಸ್ಕರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರವೀಂದ್ರ ಪ್ರಭು ಮತ್ತು ಬಳಗದವರಿಂದ ರಾಗ್ ರಂಗ್ ಭಕ್ತಿಭಾವ ಜನಪದ ಗೀತೆ ರಸಮಂಜರಿ ಕಾರ್ಯಕ್ರಮ ನಡೆಯಿತು
Kshetra Samachara
22/02/2021 10:40 pm