ಮುಲ್ಕಿ: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು 88 ಜೋಡಿ ಹೊಸ ಬದುಕಿಗೆ ಪದಾರ್ಪಣೆ ಮಾಡಿದರು.
ಬೆಳಗ್ಗಿನಿಂದಲೇ ಕಟೀಲು ದೇವಸ್ಥಾನದಲ್ಲಿ ಭಾರಿ ಜನಜಂಗುಳಿ ಸೇರಿದ್ದು, ಸೋಮವಾರ ಬಳಿಕ ಮೌಡ್ಯದ ಹಿನ್ನೆಲೆಯಲ್ಲಿ ಮುಂದಿನ ಎರಡು ತಿಂಗಳು ಮದುವೆಗೆ ಮುಹೂರ್ತ ಇಲ್ಲದ ಕಾರಣ ಭಾನುವಾರ(ಇಂದು) ಮದುವೆ ಸಮಾರಂಭ ಭರ್ಜರಿಯಾಗಿಯೇ ನಡೆದಿದೆ.
ಈ ಬಾರಿ ಕಟೀಲಿನಲ್ಲಿ ವಿಶಾಲವಾದ ಜಾಗವಿರುವ ಕಾರಣ ಸಭೆ, ಸಮಾರಂಭಗಳಿಗೆ ಅಡ್ಡಿಯಾಗಿಲ್ಲ. ರಥಬೀದಿಯಲ್ಲಿ ಬಸ್ ಸಂಚಾರ ಮೊಟಕುಗೊಳಿಸಿದ್ದು, ಕಟೀಲು ಸೇತುವೆಯ ಬಳಿ ದೇವಳದ ಸಿಬ್ಬಂದಿ ಬ್ಯಾರಿಕೇಡ್ ಇರಿಸಿ ರಸ್ತೆತಡೆ ಆಗುವುದನ್ನು ತಪ್ಪಿಸಿದರು. ಕಾರು, ಬಸ್ ಸಹಿತ ಘನ ವಾಹನಗಳನ್ನು ಉಲ್ಲಂಜೆ ಮೂಲಕ ಕಿನ್ನಿಗೋಳಿ ಕಡೆಗೆ ಕಿನ್ನಿಗೋಳಿ ಕಡೆಯಿಂದ ಬಜಪೆ ಕಡೆಗೆ ಬರುವ ವಾಹನಗಳು ನಿರಾತಂಕವಾಗಿ ಸಂಚರಿಸಿದೆ. ಆದರೆ, ಕಾರಿನಲ್ಲಿ ಬರುವವರಿಗೆ ಸೇತುವೆ ಬದಿಯಲ್ಲಿ ಪಾರ್ಕಿಂಗ್ ಗೆ ಸ್ವಲ್ಪ ತೊಂದರೆ ಉಂಟಾಯಿತು ಹಾಗೂ ದೇವಳಕ್ಕೆ ವಾಹನದಲ್ಲಿ ಬರುವ ವಯೋವೃದ್ಧರಿಗೆ ವಾಹನಗಳನ್ನು ಒಳಗಡೆ ಬಿಡಲಾಯಿತು.
Kshetra Samachara
21/02/2021 03:54 pm