ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉದಯಗಿರಿ ಸಂಪ್ಯ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನಡೆದ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆ ಕೋಲ ನಡೆಯಿತು.
ತುಳುನಾಡಿನಲ್ಲಿ ನಡೆಯುವ ಭೂತಾರಾಧನೆಗಳಂತಲ್ಲದೆ, ಈ ಒತ್ತೆಕೋಲ ಎಲ್ಲೆಡೆಯೂ ಕಂಡು ಬರುವುದಿಲ್ಲ. ಕೆಲವೇ ಕೆಲವು ಕಡೆಗಳಲ್ಲಿ ಈ ಆಚರಣೆ ನಡೆಸಲಾಗುತ್ತದೆ. ಮುಖ್ಯವಾಗಿ ಕೇರಳ ಗಡಿಗೆ ಹೊಂದಿಕೊಂಡಿರುವ ಮಂಗಳೂರಿನ ಪ್ರದೇಶಗಳಲ್ಲಿ ಈ ಒತ್ತೆಕೋಲದ ಪ್ರಭಾವ ಕಾಣಬಹುದು.
ಈ ಆಚರಣೆ ಮಂಗಳೂರಿಗಿಂತ ಹೆಚ್ಚಾಗಿ ಕೇರಳದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ನೋಡಬಹುದು. ಇದನ್ನು ಕೇರಳಿಗರು ವಿಷ್ಣುಮೂರ್ತಿ ತೆಯ್ಯಂ ಎಂದು ಕರೆದರೆ ತುಳುವರು ಒತ್ತೆ ಕೋಲ ಎಂದು ಕರೆಯುತ್ತಾರೆ.
ಬೆಳಗಿನ ಜಾವ ನಡೆಯುವ ವಿಷ್ಣುಮೂರ್ತಿ ಕೆಂಡಸೇವೆ ಈ ಆಚರಣೆಯ ಪ್ರಮುಖ ಆಕರ್ಷಣೆ. ಕೆಂಡಸೇವೆ ಹಾಗೂ ಇದರ ಹಿಂದಿರುವ ಇತಿಹಾಸ ಒತ್ತೆ ಕೋಲವನ್ನು ಇತರ ಆಚರಣೆಗಳಿಗಿಂತ ಭಿನ್ನವಾಗಿರಿಸುತ್ತವೆ.
Kshetra Samachara
21/02/2021 03:36 pm