ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಹಿರಿಯ ಯಕ್ಷಕಲಾವಿದ ಶ್ರೀಧರ ಭಂಡಾರಿ ಅಗಲಿಕೆಗೆ ರಂಗಸ್ಥಳದಲ್ಲೇ ಕಂಬನಿ ಮಿಡಿದ ಯಕ್ಷಗಾನ ಕಲಾವಿದರು

ಬಂಟ್ವಾಳ: ರಾತ್ರಿ ಯಕ್ಷಗಾನ ಪ್ರದರ್ಶನ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ಭಂಡಾರಿ ನಿಧನ ವಾರ್ತೆಯನ್ನು ಕೇಳಿದ ಸುಂಕದಕಟ್ಟೆ ಮೇಳದ ಕಲಾವಿದರು, ರಂಗಸ್ಥಳದಲ್ಲಿಯೇ ಪ್ರದರ್ಶನವನ್ನು ಕೆಲಹೊತ್ತು ನಿಲ್ಲಿಸಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಘಟನೆ ಬಂಟ್ವಾಳ ತಾಲೂಕಿನ ಸರಪಾಡಿ ಎಂಬಲ್ಲಿ ನಡೆದಿದೆ.

ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಯಕ್ಷಗಾನ ಕ್ಷೇತ್ರದ ಸಿಡಿಲಮರಿ ಪುತ್ತೂರು ಶ್ರೀಧರ ಭಂಡಾರಿಯವರ ನಿಧನವಾರ್ತೆ ತಿಳಿದಾಕ್ಷಣ ಸರಪಾಡಿಯಲ್ಲಿ ಗುರುವಾರ ರಾತ್ರಿಪೂರ್ತಿ ನಡೆದ ಯಕ್ಷಗಾನದ ರಂಗಸ್ಥಳದಲ್ಲೇ ಸುಂಕದಕಟ್ಟೆ ಮೇಳದದ ಕಲಾವಿದರು ಕಂಬನಿ ಮಿಡಿದರು. ಹಿರಿಯ ವೇಷಧಾರಿ ಕೊಳ್ತಿಗೆ ನಾರಾಯಣ ಗೌಡ ಜಾಂಬವ ಪಾತ್ರಧಾರಿಯಾಗಿದ್ದು, ರಂಗಸ್ಥಳದಲ್ಲಿ ಶ್ರೀಧರ ಭಂಡಾರಿಯವರ ಗುಣಗಾನ ಮಾಡಿದರು.

ಯಕ್ಷಗಾನ ರಂಗದ ಒಂದು ಅನರ್ಘ್ಯರತ್ನವು ಕಳೆದುಹೋಗಿದೆ. ಮತ್ತೊಮ್ಮೆ ಹುಟ್ಟಿ ಬರಲಿ, ಅವರು ಕಲಾವಿದ ಮಾತ್ರವಲ್ಲದೇ ಪುತ್ತೂರು ಮೇಳದ ಯಜಮಾನಿಕೆಯನ್ನು ವಹಿಸಿಕೊಂಡಿದ್ದು ಹಲವು ಕಲಾವಿದರಿಗೆ ಆಶ್ರಯವನ್ನು ನೀಡಿದ್ದರು ಎಂದು ತಿಳಿಸಿ ಭಂಡಾರಿಯವರೊಂದಿಗಿನ ಒಡನಾಟವನ್ನು ಸ್ಮರಿಸಿದರು. ಈ ಸಂದರ್ಭ ಭಾಗವತರಾದ ಯೋಗೀಶ್ ಶರ್ಮ ಅಳದಂಗಡಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

20/02/2021 07:39 pm

Cinque Terre

6.79 K

Cinque Terre

1

ಸಂಬಂಧಿತ ಸುದ್ದಿ