ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶಿವಪ್ರಭಾ ಯಕ್ಷಗಾನ ಕೇಂದ್ರ 50ನೇ ವರ್ಷಾಚರಣೆ; ರಾಷ್ಟ್ರ ಮಟ್ಟದ ಉಚಿತ ಯಕ್ಷ ಕಮ್ಮಟ

ಉಡುಪಿ: ಶಿವಪ್ರಭಾ ಸಂಸ್ಥೆ 50 ಸಾರ್ಥಕ ವರ್ಷ ಪೂರೈಸಿದೆ. ಈ ಸುಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ರಾಷ್ಟ್ರಮಟ್ಟದ ರಂಗಭೂಮಿ ಕಲಾವಿದರು ಮತ್ತು ರಂಗಕರ್ಮಿಗಳಿಗೆ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ನೇತೃತ್ವದಲ್ಲಿ ಉಚಿತ ಯಕ್ಷಗಾನ ಕಮ್ಮಟ ಆಯೋಜಿಸಲು ಸಂಸ್ಥೆ ತೀರ್ಮಾನಿಸಿದೆ.

ಉಡುಪಿ ಯಕ್ಷಗಾನ ಕೇಂದ್ರ ಉಚಿತ ಶಿಬಿರವನ್ನು ಕೈಗೊಳ್ಳುತ್ತದೆ ಎಂಬ ಮಾಹಿತಿ ಪಡೆದ ದೇಶದ ವಿವಿಧ ರಾಜ್ಯಗಳ ರಂಗಕರ್ಮಿಗಳು 300 ಕ್ಕೂ ಹೆಚ್ಚು ಅರ್ಜಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಈ ಪೈಕಿ ದೆಹಲಿ, ಮಹಾರಾಷ್ಟ್ರ, ಜೈಪುರ, ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ 18 ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಇಂದ್ರಾಳಿ ಯಕ್ಷಗಾನ ಕೇಂದ್ರದಲ್ಲೇ ನಿರಂತರ 20 ದಿನ ಶಿಬಿರ ನಡೆಯಲಿದೆ.

ಫೆ. 20 ರಿಂದ ಮಾರ್ಚ್ 10ರ ವರೆಗೆ ಬಡಗುತಿಟ್ಟು ಯಕ್ಷಗಾನವನ್ನೇ ಪ್ರಧಾನವಾಗಿಟ್ಟುಕೊಂಡು ತರಬೇತಿ ನೀಡಲಾಗುವುದು.

ತೆಂಕುತಿಟ್ಟು ಯಕ್ಷಗಾನದ ವೇಷಗಾರಿಕೆ ಹೆಜ್ಜೆಯ ಒಂದು ದಿನದ ಕಾರ್ಯಾಗಾರ ನಡೆಸಲಾಗುವುದು. ದೇಶದ ಮೂಲೆ ಮೂಲೆಯಿಂದ ಬರುವ ಶಿಬಿರಾರ್ಥಿಗಳಿಗೆ ಕರಾವಳಿಯ ಸಂಸ್ಕೃತಿ ಪರಿಚಯಿಸುವ ಉದ್ದೇಶ ಯಕ್ಷಗಾನ ಕೇಂದ್ರ ಹೊಂದಿದೆ. ನಾಗಮಂಡಲ, ದೈವಾರಾಧನೆ ಮುಂತಾದ ಹಲವು ಕರಾವಳಿಯ ಕಲಾಪ್ರಕಾರಗಳನ್ನು ಥಿಯೇಟರ್ ಆರ್ಟಿಸ್ಟ್ ಗಳಿಗೆ ಪರಿಚಯಿಸಲಾಗುತ್ತದೆ.

ವೇಷಭೂಷಣ, ಮುಖವರ್ಣಿಕೆ ಬಗ್ಗೆ ಕಮ್ಮಟ ನಡೆಯಲಿದೆ. ಈ ಮೂಲಕ ವಿವಿಧ ಕಲಾಪ್ರಕಾರಗಳನ್ಬು ಕರಗತ ಮಾಡಿಕೊಂಡವರಿಗೆ ಯಕ್ಷಗಾನ ಕಲಿಸಲಾಗುತ್ತದೆ. ಕಲಾವಿದನ ಬದುಕು, ಜೀವನ ಕಟ್ಟಿಕೊಳ್ಳುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸವಿದೆ.

ಶಿಬಿರಾರ್ಥಿಗಳಿಗೆ ಊಟ, ವಸತಿ 20 ದಿನದ ಓಡಾಟದ ಎಲ್ಲ ಖರ್ಚನ್ನು ಯಕ್ಷಗಾನ ಕೇಂದ್ರವೇ ಭರಿಸಲಿದೆ. ಉದ್ಘಾಟನೆ ಫೆ. 21ರಂದು ಸಂಜೆ 6ಕ್ಕೆ ನಡೆಯಲಿದೆ. ಮಾರ್ಚ್ 9ರಿಂದ 10ರ ವರೆಗೆ ಕಲಾ ಪ್ರದರ್ಶನ ಜರುಗಲಿದೆ.

ಕಮ್ಮಟದಲ್ಲಿ ರಂಗ ವ್ಯಾಯಾಮ, ಯಕ್ಷ ತಾಳ, ಸ್ವರಾಭ್ಯಾಸ, ಕಿರುಚಿತ್ರ ವೀಕ್ಷಣೆ, ಯಕ್ಷಗಾನ ಕುಣಿತ, ಆಂಗಿಕ ಅಭ್ಯಾಸ ಮಾಡಿಸಲಾಗುವುದು.

Edited By : Manjunath H D
Kshetra Samachara

Kshetra Samachara

17/02/2021 12:27 pm

Cinque Terre

6.41 K

Cinque Terre

0

ಸಂಬಂಧಿತ ಸುದ್ದಿ