ಉಡುಪಿ: ಅಕ್ಷರ ದಾಸೋಹ ನೌಕರರ ಐದನೇ ಜಿಲ್ಲಾ ಸಮ್ಮೇಳನ ಉಡುಪಿಯ ಬನ್ನಂಜೆಯಲ್ಲಿರುವ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು.ಸಮ್ಮೇಳನವನ್ನು ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು,ಅಕ್ಷರ ದಾಸೋಹ ನೌಕರರ ಬೇಡಿಕೆಗಳ ಬಗ್ಗೆ ಸರಕಾರ ನಿರ್ಲಕ್ಷ್ಯ ವಹಿಸುತ್ತಾ ಬಂದಿದೆ.
ಕೊರೋನಾ ಸಂಕಷ್ಟ ಕಾಲದಲ್ಲೂ ನೌಕರರು ತಮ್ಮ ಕೆಲಸಗಳನ್ನು ಯಾವುದೇ ಅಳುಕಿಲ್ಲದೆ ನಿರ್ವಹಿಸಿದ್ದಾರೆ.ಆದರೆ ಅವರಿಗೆ ಸೇವಾ ಭದ್ರತೆ ನೀಡಿ ,ಅವರಿಗೆ ಕನಿಷ್ಠ ವೇತನ 21 ಸಾವಿರ ರೂಗೆ ಏರಿಸಿ ಎಂದು ಹೇಳಿದರೆ ಸರಕಾರ ಕಿಂಚಿತ್ತೂ ಬೆಲೆ ಕೊಡುತ್ತಿಲ್ಲ.ಈಗ ಇರುವ ವೇತನವನ್ನೇ ಬಹಳ ಕಷ್ಟ ಪಟ್ಟು ,ಕಾನೂನು ಹೋರಾಟದ ಮೂಲಕ ಪಡೆಯಬೇಕಾಗಿದೆ.ಸರಕಾರದ ಇಂತಹ ನಿರ್ಲಕ್ಷ್ಯ ಧೋರಣೆ ಸಲ್ಲದು.ಶೀಘ್ರ ಅಕ್ಷರ ದಾಸೋಹ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.ಸಮ್ಮೇಶನದಲ್ಲಿ ನೂರಾರು ಕಾರ್ಯಕರ್ತೆಯರು ,ಮುಖಂಡರು ಹಾಜರಿದ್ದರು.
Kshetra Samachara
13/02/2021 03:01 pm