ಮುಲ್ಕಿ: ಪಕ್ಷಿಕೆರೆ ಸಮಿಪದ ಪಂಜ ಕೊಯಿಕುಡೆ ಶ್ರೀ ಹರಿಪಾದೆ ಧರ್ಮದೈವ ಜಾರಂತಾಯ ನೇಮೋತ್ಸವ ಶ್ರೀಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರ ಶುಭ ಹಾರೈಕೆಯೊಂದಿಗೆ ನಡೆಯಿತು.
ಫೆ.3ರಂದು ಬೆಳಿಗ್ಗೆ ಕೋಳಿ ಗುಂಟ ಮಾಡುವುದರ ಮೂಲಕ ನೇಮಕ್ಕೆ ಚಾಲನೆ ನೀಡಲಾಯಿತು. ಅಂದು ಸಂಜೆ ಭಂಡಾರ ಮನೆಯಿಂದ ಶ್ರೀ ದೈವ ಜಾರಂತಾಯ ದೈವದ ಭಂಡಾರ ದೈವಸ್ಥಾನಕ್ಕೆ ಆಗಮಿಸಿತು. ಬಳಿಕ ರಾತ್ರಿ ಚೌತಿಹಬ್ಬ, ತುಡರ ಬಲಿ ನಡೆಯಿತು.
ಗುರುವಾರ ಬೆಳಿಗ್ಗೆ ದೈವಸ್ಥಾನದಲ್ಲಿ ತುಲಾಭಾರ ಸೇವೆ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಜಾರಂತಾಯ ದೈವಸ್ಥಾನದ ವರ್ಷಾವಧಿ ನೇಮೋತ್ಸವ ನಡೆಯಿತು.
ಈ ಸಂದರ್ಭ ಮಾಜಿ ಧಾರ್ಮಿಕ ಪರಿಷತ್ ಸದಸ್ಯರು ಹಾಗೂ ಕ್ಷೇತ್ರದ ತಂತ್ರಿಗಳಾದ ಪಂಜ ಭಾಸ್ಕರ ಭಟ್ ಮಾತನಾಡಿ, ಮುಲ್ಕಿ ಒಂಬತ್ತು ಮಾಗಣೆಯ ಕಾರಣಿಕ ಕ್ಷೇತ್ರದಲ್ಲಿ ಒಂದಾದ ಪಂಜ ಕೊಯಿಕುಡೆ ಶ್ರೀ ಹರಿಪಾದೆ ಧರ್ಮದೈವ ಜಾರಂತಾಯ ದೈವಸ್ಥಾನದ ವಾರ್ಷಿಕ ನೇಮೋತ್ಸವ ವಿಜೃಂಭಣೆಯಿಂದ ನಡೆದಿದ್ದು ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದಾರೆ. ಆ ದೈವ- ದೇವರುಗಳು ವಿಶ್ವದಿಂದಲೇ ಕ ಕೊರೊನಾವನ್ನು ನಿರ್ಮೂಲನೆಗೊಳಿಸಲಿ ಎಂದು ಪ್ರಾರ್ಥಿಸಿದರು.
ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರ ನಲ್ಯಗುತ್ತು ಪ್ರಕಾಶ್ ಟಿ.ಶೆಟ್ಟಿ ಮಾತನಾಡಿ, ಮಾ. 28 ಭಾನುವಾರ ಸಂಜೆ ಹರಿಪಾದೆ ಧರ್ಮ ದೈವ ಜಾರಂತಾಯನ ಭಂಡಾರ ಮನೆಯಿಂದ ಭಂಡಾರ ಹೊರಟು ಅತ್ತೂರು ಅರಸು ಕುಂಜರಾಯ ದೈವದ ನೇಮೋತ್ಸವ ಹಾಗೂ ಮಾ.30ರಂದು ಅತ್ತೂರು ಅರಸು ಕುಂಜರಾಯ ದೈವಸ್ಥಾನದಲ್ಲಿ ಹರಿಪಾದೆ ಧರ್ಮದೈವ ಜಾರಂತಾಯ ದೈವದ ನೇಮೋತ್ಸವ ನಡೆಯಲಿದೆ ಎಂದರು. ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತಿತರ ಗಣ್ಯರು ದೈವಸ್ಥಾನಕ್ಕೆ ಭೇಟಿ ನೀಡಿ, ಪ್ರಸಾದ ಸ್ವೀಕರಿಸಿದರು. ಬಳಿಕ ನೇಮೋತ್ಸವ ನಡೆಯಿತು.
Kshetra Samachara
12/02/2021 11:53 am