ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಪರೋಪಕಾರ ಜೀವನದಿಂದ ಲೋಕಕಲ್ಯಾಣ; ಶ್ರೀ ಯೋಗೇಶ್ವರಿ ಮಾತಾಜಿ

ಮುಲ್ಕಿ: ಇಲ್ಲಿಗೆ ಸಮೀಪದ ಕೆ.ಎಸ್. ರಾವ್ ನಗರ ಲಿಂಗಪ್ಪಯ್ಯಕಾಡು ಶ್ರೀ ಶಿವಯೋಗೇಶ್ವರ ಮಂದಿರದ ಶ್ರೀ ಮಹಾಗಣಪತಿ ಮತ್ತು ಶ್ರೀ ಸಾಂಬ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಹಾಗೂ ಕುಂಭಾಭಿಷೇಕ ಅಂಗವಾಗಿ ಗುರುವಾರ ವಿಜಯಪುರ ಸಿದ್ದಾರೂಢ ಮಠದ ಶ್ರೀ ಯೋಗೇಶ್ವರಿ ಮಾತಾಜಿ ಯವರಿಂದ ಆಧ್ಯಾತ್ಮಿಕ ಪ್ರವಚನ ನಡೆಯಿತು.

ಮಾತಾಜಿಯವರು ಮಾತನಾಡಿ, ಪರೋಪಕಾರ ಜೀವನದಿಂದ ಲೋಕಕಲ್ಯಾಣ ಸಾಧ್ಯ. ನಾಲಿಗೆಯು ಜಾತಿ- ಜಾತಿಗಳಲ್ಲಿ ಹೊಡೆದಾಟವನ್ನು ಸೃಷ್ಟಿಸುತ್ತದೆ, ಹಾಗೆಯೇ ಒಳ್ಳೆಯ ಬಾಂಧವ್ಯವನ್ನೂ ಬೆಸೆಯುತ್ತದೆ.

ಆದರೆ, ನಾವು ಕೆಟ್ಟದ್ದನ್ನು ಬಿಟ್ಟು ಒಳ್ಳೆಯ ದಾರಿಯಲ್ಲಿ ಬದುಕಲು ಕಲಿಯಬೇಕು ಎಂದರು. ಪ್ರವಚನಕಾರರಾದ ಸಂಗೀತ ಮಾತಾಜಿ, ಶಿವ ಯೋಗೇಶ್ವರ ಮಂದಿರದ ಅಧ್ಯಕ್ಷ ಗೊಳಾಲಪ್ಪ ತಮಗೊಂಡ, ಮುಖ್ಯ ಅತಿಥಿಗಳಾಗಿ ವೀರಯ್ಯ ಹಿರೇಮಠ ಮಂಜುನಾಥ ಕಂಬಾರ, ಗುರುಪಾದಯ್ಯ ಸ್ವಾಮಿ, ಹನುಮಂತ ಗಂಗನ ಬೂದಾಳ,ಅಶೋಕ್ ಪೂಜಾರ,ಬಸವರಾಜ, ವೀರಣ್ಣ ಅರಳು ಗುಂಡಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಮಂದಿರದ ಅಧ್ಯಕ್ಷ ಗೊಳಾಲಪ್ಪ ತಮಗೊಂಡ ಮಾತನಾಡಿ, ಫೆ.14 ಮತ್ತು 15ರಂದು ಶ್ರೀ ಶಿವಯೋಗೇಶ್ವರ ಮಂದಿರದ ಪ್ರತಿಷ್ಠಾ ಮಹೋತ್ಸವ ಹಾಗೂ ಕುಂಭಾಭಿಷೇಕ ಮತ್ತು ಧಾರ್ಮಿಕ ವಿಧಿ ವಿಧಾನಗಳು ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದರು. ಕೋಶಾಧಿಕಾರಿ ಮಲ್ಲನಗೌಡ ಸ್ವಾಗತಿಸಿ, ನಿರೂಪಿಸಿದರು.

Edited By : Manjunath H D
Kshetra Samachara

Kshetra Samachara

11/02/2021 10:07 pm

Cinque Terre

6.6 K

Cinque Terre

0

ಸಂಬಂಧಿತ ಸುದ್ದಿ