ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದ ಐಕಳ ಕಂಬಳ ಕೂಟ..

ಮಂಗಳೂರು:ಕೋವಿಡ್ ನಿಯಮಗಳ ನಡುವೆ ಕರಾವಳಿಯಲ್ಲಿ ಕಂಬಳ ಕ್ರೀಡೆ ಅದ್ಧೂರಿಯಾಗಿ ನಡೆಯುತ್ತಿದೆ..ಮಂಗಳೂರು ನಗರ ಹೊರವಲಯದ ಐಕಳದಲ್ಲಿ ಎರಡನೇ ಕಂಬಳ ಕ್ರೀಡೆ ಭಾರೀ ವಿಜೃಂಭಣೆಯಿಂದ ಜರುಗಿದ್ದು,ಸಾವಿರಾರು ಕಂಬಳಾಭಿಮಾನಿಗಳು ಭಾಗವಹಿಸಿದ್ದಾರೆ..ಐಕಳ ಕಂಬಳ ಕೂಟದಲ್ಲಿ ವಿಶೇಷವಾಗಿ ಕಂಬಳ ಇತಿಹಾಸದ ದಾಖಲೆಗಳ ಸರದಾರ ಚೆನ್ನ ಎಂಬ ಕೋಣಕ್ಕೆ ಸನ್ಮಾನ ಕಾರ್ಯಕ್ರಮ ನಡೆದಿದ್ದು,ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ..ಬರೋಬ್ಬರಿ 164 ಚಿನ್ನದ ಪದಕಗಳನ್ನು ಗಳಿಸಿರುವ ಕೊಳಚ್ಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ ಎಂಬುವವರಿಗೆ ಸೇರಿದ ಕೋಣ ಇದಾಗಿದ್ದು ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಚೆನ್ನ ಎಂಬ ಕೋಣಕ್ಕೆ ಸನ್ಮಾನವಾಗಿದೆ...ಅತ್ಯಾಕರ್ಷಕ ಮೈಕಟ್ಟು,ಉದ್ದನೆಯ ಕೋಡು,ಚಿಗರೆಯಂತಹ ಓಟದಿಂದಲೇ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿರುವ ಚೆನ್ನ ಕೋಣನಿಗೆ ಸನ್ಮಾನ ಎಲ್ಲರ ಗಮನಸೆಳೆದಿದೆ..ಕನೆಹಲಗೆ,ಅಡ್ಡಹಲಗೆ,ನೇಗಿಲು ಕಿರಿಯ, ನೇಗಿಲು ಹಿರಿಯ,ಹಗ್ಗ ಕಿರಿಯ,ಹಗ್ಗ ಹಿರಿಯ ಎಂಬ ವಿಭಾಗಗಳಲ್ಲಿ ಕಂಬಳ ಕ್ರೀಡೆ ಜರುಗಿದ್ದು,ಕೊರೊನಾ ಆತಂಕದ ನಡುವೆಯೂ ಇನ್ನೂರಕ್ಕೂ ಅಧಿಕ ಜೊತೆ ಕೋಣಗಳು ಕಂಬಳ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು...ಮಂಗಳೂರು ನೂತನ ಪೊಲೀಸ್ ಕಮೀಷನರ್ ಎನ್‌.ಶಶಿಕುಮಾರ್ ಕೂಡಾ,ಸಾಮಾನ್ಯ ಪ್ರೇಕ್ಷಕರಂತೆ ಕುಟುಂಬ ಸಮೇತವಾಗಿ ಬಂದು ಕಂಬಳವನ್ನು ನೋಡಿ ಸಂಭ್ರಮಪಟ್ಟರು...

Edited By : Manjunath H D
Kshetra Samachara

Kshetra Samachara

07/02/2021 01:00 pm

Cinque Terre

18.97 K

Cinque Terre

0

ಸಂಬಂಧಿತ ಸುದ್ದಿ