ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಗಂಗೊಳ್ಳಿ ಮಾವಿನಕಟ್ಟೆ ಶ್ರೀ ಮಾರಿಕಾಂಬಾ ದೇವಿ, ಸಹಪರಿವಾರ ದೈವಗಳ ನೂತನ ಪ್ರತಿಷ್ಠಾ ಮಹೋತ್ಸವ

ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಗುಜ್ಜಾಡಿ ನಾಯಕವಾಡಿ (ಮಾವಿನಕಟ್ಟೆ)

ತ್ರಾಸಿ ಗಂಗೊಳ್ಳಿ ಮುಖ್ಯರಸ್ತೆ ಮಾವಿನಕಟ್ಟೆಯ ಬಳಿಯಲ್ಲಿರುವ ಶ್ರೀ ಮಾರಿಕಾಂಬಾ ದೇವಿ ಮಹಾಸತಿ, ಗುಳಿಗ- ಸಹಪರಿವಾರ ದೈವಗಳು ಸುಮಾರು ನೂರಾರು ವರ್ಷಗಳ ಹಿಂದಿನಿಂದ ಈ ಜಾಗದಲ್ಲಿ ನೆಲೆಸಿರುವ ದೈವ-ದೇವರುಗಳು.

'ಚರ' ವ್ಯವಸ್ಥೆಯಲ್ಲಿದ್ದು, ನಾಯಕವಾಡಿ ಮಾವಿನಕಟ್ಟೆ ಎಂಬಲ್ಲಿ ನಿರಂತರ ರಸ್ತೆ ಅಪಘಾತವಾಗುತ್ತಿತ್ತು. ಹಲವು ಸಾವು-ನೋವುಗಳು ಕೂಡ ಇಲ್ಲಿ ಸಂಭವಿಸಿದೆ. ಇದನ್ನು ಮನಗಂಡು ಊರಿನ ನೂರಾರು ಜನರು ಸೇರಿ ಖ್ಯಾತ ವಿದ್ವಾಂಸರಿಂದ ಆರೂಢ ಪ್ರಶ್ನೆ ಹಾಕಿದಾಗ ಅಪಘಾತ ನಡೆಯುವುದು ಸತ್ಯವೆಂದು ತಿಳಿದುಬಂದಿದೆ. ಕೂಡಲೇ ದೇವಸ್ಥಾನ ನಿರ್ಮಾಣ ಮಾಡಿ ದೈವಗಳಿಗೆ ನೆಲೆ ಕೊಡಬೇಕೆಂದು ಪ್ರಶ್ನೆಯಲ್ಲಿ ಗೊತ್ತಾಯಿತು. ತಕ್ಷಣ ಊರಿನ ಜನರು ಸೇರಿ ಕ್ಷೇತ್ರ ನಿರ್ಮಾಣ ಮಾಡಿದರು.

ಫೆ.4ರಂದು ಪುರ ಮೆರವಣಿಗೆ ಹಾಗೂ ನೂತನ ಕಟ್ಟಡ ಉದ್ಘಾಟನೆ ಮತ್ತು ದೇವರ ಪುನರ್ ಪ್ರತಿಷ್ಠೆ, ಫೆ.5ರಂದು ಸಾರ್ವಜನಿಕ ಅನ್ನ ಸಂತರ್ಪಣೆ ನಡೆದೆ. ಈ ಎಲ್ಲ ಕಾರ್ಯಕ್ರಮಗಳು ವೇ.ಮೂ. ಶ್ರೀಧರ ಭಟ್ಟರು ಬೆಳ್ಕಳಿ ಅವರ ನೇತೃತ್ವದಲ್ಲಿ ಜರುಗಿತು.

Edited By : Manjunath H D
Kshetra Samachara

Kshetra Samachara

05/02/2021 08:37 pm

Cinque Terre

23.78 K

Cinque Terre

0

ಸಂಬಂಧಿತ ಸುದ್ದಿ