ಮುಲ್ಕಿ: ಮುಲ್ಕಿ ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ವಠಾರದಲ್ಲಿ ಪೊಲೀಸ್ ಠಾಣೆಯ ಸೇವಾರ್ಥ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದವರಿಂದ " ಓಂ ನಮಃ ಶಿವಾಯ" ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಿತು.
ಸಂಜೆ 7 ಗಂಟೆಗೆ ಚೌಕಿ ಪೂಜೆ ನಡೆಯಿತು. ಚೌಕಿ ಪೂಜೆಯಲ್ಲಿ ಮೂಡುಬಿದಿರೆ ಸಿಜೆ ಜೆಎಂ ಎಫ್ ಸಿ ನ್ಯಾಯಾಧೀಶರಾದ ಯಶವಂತ ದಂಪತಿಯನ್ನು ಅರ್ಚಕ ಗುರುರಾಜ್ ಭಟ್ ಗೌರವಿಸಿದರು. ಈ ಸಂದರ್ಭ ಪಣಂಬೂರು ಎಸಿಪಿ ಬೆಳ್ಳಿಯಪ್ಪ ಮಾತನಾಡಿ, ಕಲೆಯನ್ನು ಆರಾಧಿಸುವ ಮೂಲಕ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡಿ ಕಲಾವಿದರ ಬದುಕು ಹಸನುಗೊಳಿಸಲು ಮುಂದಾಗುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಶೈಲೇಶ್, ಬಾಲಚಂದ್ರ ಕಾಮತ್, ದಯಾವತಿ ಅಂಚನ್, ಉದ್ಯಮಿ ಉದಯಕುಮಾರ್ ಶೆಟ್ಟಿ ಆದಿಧನ್ ಮುಲ್ಕಿ, ರಮಾನಾಥ ಪೈ ಎಸ್ ಸ್ವಿಟಿ, ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಯಕ್ಷಗಾನ ಬಯಲಾಟ ನಡೆಯಿತು.
Kshetra Samachara
03/02/2021 09:58 am