ಉಡುಪಿ: ಉಡುಪಿ ಜಿಲ್ಲಾ ಮೀನುಗಾರರ ಹಾಗೂ ಮೀನು ಕಾರ್ಮಿಕರ ಸಂಘ ದ (ಸಿಐಟಿಯು) ಜಿಲ್ಲಾ ಸಮಾವೇಶ ಉಡುಪಿಯ ಬನ್ನಂಜೆಯ ಶಿವಗಿರಿ ಹಾಲ್ ನಲ್ಲಿ ನಡೆಯಿತು. ಮೀನುಗಾರರ ಕಲ್ಯಾಣ ಮಂಡಳಿ ರಚನೆಯಾಗಬೇಕು, ಮೀನುಗಾರರಿಗೆ ವೈದ್ಯಕೀಯ ಸವಲತ್ತು ಸಿಗಬೇಕು, 60 ವರ್ಷ ವಯಸ್ಸಾದವರಿಗೆ ತಿಂಗಳಿಗೆ 6000 ಪಿಂಚಣಿ ಸಿಗಬೇಕು, ವರ್ಷದಲ್ಲಿ ಮಳೆಗಾಲ ಸಂದರ್ಭ ಮೂರು ತಿಂಗಳು ಉಚಿತ ಸಿಗಬೇಕು ಮುಂತಾದ ಬೇಡಿಕೆಯನ್ನು ಮುಂದಿಟ್ಟು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು.
ಮೀನುಗಾರ ಮುಖಂಡರು ಮತ್ತು ಸಿಐಟಿಯು ಮುಖಂಡರು ಸಮಾವೇಶದಲ್ಲಿ ಮೀನುಗಾರರ ಕುರಿತು ಸರಕಾರದ ನಿರ್ಲಕ್ಷತನ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಕರಾವಳಿಯ ಬಹುದೊಡ್ಡ ಸಮುದಾಯವಾದ ಮೀನುಗಾರರ ಬಹುದಿನಗಳ ಬೇಡಿಕೆ ಈಡೇರಿಬೇಕು ಎಂದು ಸಭೆಯಲ್ಲಿ ಒತ್ತಾಯ ಕೇಳಿಬಂತು.ಸಿಐಟಿಯು ರಾಜ್ಯ ನಾಯಕರಾದ ಮುನೀರ್ ಕಾಟಿಪಳ್ಳ ,ಕಾರ್ಮಿಕ ಮುಖಂಡ ಬಾಲಕೃಷ್ಣ ಸಹಿತ ಹಲವು ಮುಖಂಡರು ಉಪಸ್ಥಿತರಿದ್ದರು.
Kshetra Samachara
01/02/2021 11:56 am